ADVERTISEMENT

ಮುಖ್ಯಮಂತ್ರಿ ಸಲಹೆಗಾರ ಸ್ಥಾನ ಕೊಟ್ಟಿರುವುದು ತೃಪ್ತಿ ಇದೆ: ಶಾಸಕ ಬಿ.ಆರ್‌. ಪಾಟೀಲ

‘ಮುಖ್ಯಮಂತ್ರಿ ಸಲಹೆಗಾರನಾಗಿ ನನಗೆ ತೃಪ್ತಿ ಇದೆ. ನಾನು ಸಾಮಾನ್ಯ ಕಾರ್ಯಕರ್ತ. ಯಾವುದೇ ಸ್ಥಾನಮಾನ ಕೇಳಿಲ್ಲ’ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 10:03 IST
Last Updated 1 ಜನವರಿ 2024, 10:03 IST
ಬಿ.ಆರ್‌. ಪಾಟೀಲ
ಬಿ.ಆರ್‌. ಪಾಟೀಲ   

ಬೆಂಗಳೂರು: ‘ಮುಖ್ಯಮಂತ್ರಿ ಸಲಹೆಗಾರನಾಗಿ ನನಗೆ ತೃಪ್ತಿ ಇದೆ. ನಾನು ಸಾಮಾನ್ಯ ಕಾರ್ಯಕರ್ತ. ಯಾವುದೇ ಸ್ಥಾನಮಾನ ಕೇಳಿಲ್ಲ’ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉಪ ಮುಖ್ಯಮಂತ್ರಿಗೆ ಹೊಸ ವರ್ಷದ ಶುಭಾಶಯ ತಿಳಿಸಲು ಬಂದಿದ್ದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಬೇಕು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಯ ಸಾಧಿಸಲಿ ಎಂದು ಹಾರೈಸಿದೆ’ ಎಂದರು.

‘ಮುಖ್ಯಮಂತ್ರಿ ರಾಜಕೀಯ ಗಂಜಿ ಕೇಂದ್ರ ತೆರೆದಿದ್ದಾರೆ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ‘ಕುಮಾರಸ್ವಾಮಿ ತಮ್ಮ ಕಾಲದಲ್ಲಿ ಕೆಲಸಕ್ಕೆ ಬಾರದವರಿಗೆ ಹುದ್ದೆ ಕೊಟ್ಟಿದ್ದರು. ಬೇಕುಬೇಕಾದವರಿಗೆಲ್ಲ ಗೂಟದ ಕಾರು ಕೊಟ್ಟಿದ್ದರು. ಕುಮಾರಸ್ವಾಮಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.