ADVERTISEMENT

ಅಶ್ವತ್ಥನಾರಾಯಣ ಮೌನಿ ಬಾಬಾ ಏಕೆ– ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:39 IST
Last Updated 2 ಮೇ 2022, 19:39 IST
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ   

ಬೆಂಗಳೂರು: ‘ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಮಾಗಡಿ ತಾಲ್ಲೂಕಿನ ದರ್ಶನ್ ಗೌಡ ಅವರಿಂದ ₹ 80 ಲಕ್ಷಕ್ಕೂ ಹೆಚ್ಚಿನ ಹಣ ಪಡೆಯಲಾಗಿದ್ದು, ಇದರ ಹಿಂದೆ ಪ್ರಭಾವಿ ಸಚಿವರ ಸಹೋದರನ ಮೇಲೆ ಆರೋಪವಿದೆ. ಪ್ರಭಾವಿ ಸಚಿವರು ಕರೆ ಮಾಡಿ ಆ ಅಭ್ಯರ್ಥಿಯನ್ನು ವಿಚಾರಣೆಯಿಂದ ಬಿಡುಗಡೆಗೊಳಿಸಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆರೋಪಿಸಿದರು.

ಕೆ‍ಪಿಸಿಸಿ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಈ ವಿಚಾರದಲ್ಲಿ ಮೌನಿ ಬಾಬಾ ಆಗಿರುವುದೇಕೆ? ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮ ಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗರಾಜ್ ಹಾಗೂ ಸೌಮ್ಯಾ ಎಂಬುವವರ ಬಂಧನವಾಗಿದ್ದು, ಆ ಪ್ರಕರಣದಲ್ಲೂ ಅವರು ಮೌನವಾಗಿ
ರುವುದು ಸಂಶಯ ಹುಟ್ಟು ಹಾಕಿದೆ’ ಎಂದರು. ‘ದರ್ಶನ್ ಗೌಡನಿಗೆ ನೋಟಿಸ್‌ ನೀಡಿದ್ದರೂ ಬಂಧಿಸಿಲ್ಲ ಯಾಕೆ? ಹಣ ನೀಡಿರುವ ವಿಷಯ ಬಹಿರಂಗ ಆಗಬಹುದೆಂದು ಆತನನ್ನು ಬಂಧಿಸದೇ, ವಿಚಾರಣೆ ನಡೆಸದಂತೆ ಸಂಚು ರೂಪಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT