ADVERTISEMENT

ಸಾಮಾಹಿಕ ವಿವಾಹ: ದಾಂಪತ್ಯಕ್ಕೆ ಕಾಲಿಟ್ಟ ಕಾನ್‌ಸ್ಟೇಬಲ್‌ಗಳು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 14:13 IST
Last Updated 11 ಮಾರ್ಚ್ 2021, 14:13 IST
ದೇವದುರ್ಗ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಕಾನ್‌ಸ್ಟೇಬಲ್‌ಗಳಾದ ಬಸನಗೌಡ ಹಾಗೂ ಜಯಶ್ರೀ ಅವರನ್ನು ಸ್ನೇಹಿತರು ಅಭಿನಂದಿಸಿದರು
ದೇವದುರ್ಗ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಕಾನ್‌ಸ್ಟೇಬಲ್‌ಗಳಾದ ಬಸನಗೌಡ ಹಾಗೂ ಜಯಶ್ರೀ ಅವರನ್ನು ಸ್ನೇಹಿತರು ಅಭಿನಂದಿಸಿದರು   

ಅರಕೇರಾ (ರಾಯಚೂರು): ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರಭದ್ರ ಮಹಾಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಶಿವರಾತ್ರಿ ದಿನ ಶ್ರೀಮಠದಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಕಾನ್‌ಸ್ಟೇಬಲ್‌ಗಳಾದ ಬಸವನಗೌಡ ಮತ್ತು ಜಯಶ್ರೀ ದಾಂಪತ್ಯ ಕಾಲಿಟ್ಟರು.

ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮದ ಬಸವನಗೌಡ ಅವರು ಪ್ರಸ್ತುತ ಬೆಂಗಳೂರಿನ ಕೋರಮಂಗಲ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನ್ವಿ ತಾಲ್ಲೂಕಿನ ಜೀನೂರು ಗ್ರಾಮದ ಜಯಶ್ರೀ ಅವರು ಪ್ರಸ್ತುತ ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದಾರೆ.ಸರ್ಕಾರಿ ಸೇವೆಯಲ್ಲಿದ್ದರೂ ಸರಳವಾಗಿ ವಿವಾಹ ಮಾಡಿಕೊಂಡಿದ್ದು ಗಮನ ಸೆಳೆಯಿತು. ಇಬ್ಬರು ಕೈಗೊಂಡ ನಿರ್ಧಾರವನ್ನು ಪೊಲೀಸ್‌ ಸ್ನೇಹಿತರು ಅಭಿನಂದಿಸಿದರು.

‘ದುಂದುವೆಚ್ಚ ಇಲ್ಲದೆ ವಿವಾಹ ಮಾಡಿಕೊಳ್ಳುವುದು ಸಮಾಜಕ್ಕೆ ಮಾದರಿಯಾಗಿದೆ’ ಎಂದು ವಿವಾಹದಲ್ಲಿ ಪಾಲ್ಗೊಂಡಿದ್ದ ಬಸವನಗೌಡ ಅವರ ಸ್ನೇಹಿತರು ಶ್ಲಾಘಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.