ADVERTISEMENT

ಪ್ರದೀಪ್‌ ಆತ್ಮಹತ್ಯೆ: ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಲಿಂಬಾವಳಿ ವಿರುದ್ಧ ಯಾಕೆ ಇನ್ನೂ ತನಿಖೆ ಆರಂಭವಾಗಿಲ್ಲ ಎಂದು ಕಾಂಗ್ರೆಸ್ ‍ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2023, 10:09 IST
Last Updated 3 ಜನವರಿ 2023, 10:09 IST
   

ಬೆಂಗಳೂರು: ಗುತ್ತಿಗೆದಾರ ಪ್ರದೀಪ್‌ ಆತ್ಮಹತ್ಯೆ ಪ್ರಕರಣ ಸಂಬಂಧ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯನ್ನು ಬಂಧಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌‌, ಲಿಂಬಾವಳಿ ವಿರುದ್ಧ ಇನ್ನೂ ಯಾಕೆ ತನಿಖೆ ಆರಂಭವಾಗಿಲ್ಲ ಎಂದು ಪ್ರಶ್ನೆ ಮಾಡಿದೆ.

ಈ ಪ್ರಕರಣದಲ್ಲಿ ಹೆಚ್ಚಿನ ಅವ್ಯವಹಾರ ನಡೆದಿರುವ ಸಂಭವವಿದೆ ಎಂದು ಹೇಳಿರುವ ಕಾಂಗ್ರೆಸ್, #ArrestLimbavali ಎನ್ನುವ ಹ್ಯಾಷ್‌ ಟ್ಯಾಗ್‌ ಬಳಕೆ ಮಾಡಿ ವಾಗ್ದಾಳಿ ನಡೆಸಿದೆ.

‘ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತನೇ ಆಗಿದ್ದು, ಸಾಮಾಜಿಕ ಜಾಲತಾಣದ ಗುತ್ತಿಗೆ ವ್ಯವಹಾರದಲ್ಲಿ ಅರವಿಂದ ಲಿಂಬಾವಳಿ ಅವರಿಂದ ವಂಚನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಇಷ್ಟಕ್ಕೇ ಸೀಮಿತವಾಗಿರದೆ ಹೆಚ್ಚಿನ ಅವ್ಯವಹಾರಗಳು ನಡೆದಿರುವ ಸಂಭವವಿದೆ. ಆದರೆ ಲಿಂಬಾವಳಿಯವರ ತನಿಖೆ ಇನ್ನೂ ಆರಂಭವಾಗಿಲ್ಲವೇಕೆ?‘ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

‘ಪ್ರದೀಪ್ ಆತ್ಮಹತ್ಯೆಯಲ್ಲಿ ಅರವಿಂದ್ ಲಿಂಬಾವಳಿ ಅವರ ಪಾತ್ರವೇನು ಎಂಬುದರ ಕುರಿತ ತನಿಖೆಗೆ ಮುಂದಾಗುತ್ತಿಲ್ಲವೇಕೆ? ಶಾಸಕರೂ ಪ್ರದೀಪ್‌ಗೆ ವಂಚಿಸಿದವರ ಜೊತೆ ಸೇರಿ ದ್ರೋಹವೆಸಗಿದ ಗುಮಾನಿಗಳಿವೆ. ಅರವಿಂದ ಲಿಂಬಾವಳಿ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿದ್ದರೂ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇಕೆ?‘ ಎಂದು ಕಾಂಗ್ರೆಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.