ADVERTISEMENT

ನೈರುತ್ಯ ರೈಲ್ವೆ ಅಧಿಕಾರಿಗೆ ಜೈಲು

ಲಾರಿಯಲ್ಲಿ ಬಂದ ಲೂಬ್ರಿಕೇಟಿಂಗ್‌ ಆಯಿಲ್‌ ಮಂಗಮಾಯ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 16:26 IST
Last Updated 2 ಆಗಸ್ಟ್ 2018, 16:26 IST

ಬೆಂಗಳೂರು: ಲೂಬ್ರಿಕೇಟಿಂಗ್‌ ಆಯಿಲ್‌ ಹುಬ್ಬಳ್ಳಿಯ ರೈಲ್ವೆ ಡೀಸೆಲ್‌ ಶೆಡ್‌ಗೆ ಬರದಿದ್ದರೂ ಬಂದಂತೆ ನಕಲಿದಾಖಲೆ ಸೃಷ್ಟಿಸಿ ಅಕ್ರಮ ಎಸಗಿದ ಪ್ರಕರಣದಲ್ಲಿ ಆಗಿನ ಡಿ‍‍ಪೊಮೆಟಿರಿಯಲ್‌ ಸೂಪರಿಂಟೆಂಡೆಂಟ್‌ ಮುನಾಫ್‌ ದೇಸಾಯಿ ಸೇರಿದಂತೆ ಮೂವರಿಗೆ ಮೂರು ವರ್ಷ ಜೈಲು, ₹ 28 ಸಾವಿರ ದಂಡ ವಿಧಿಸಿ ಧಾರವಾಡದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

ದಂಡ ಪಾವತಿಸಲು ವಿಫಲವಾದರೆ ಇನ್ನೂ ಒಂದು ವರ್ಷ ಕಠಿಣ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ಮುನಾಫ್‌, ಐವರ ಜತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ರಿಮಿನಲ್‌ ಪಿತೂರಿ ಮಾಡಿದ್ದಾರೆಂದು ಆರೋಪಿಸಿ ಸಿಬಿಐ 2013ರಲ್ಲಿ ಸಿಬಿಐ ಮೊಕದ್ದಮೆ ದಾಖಲಿಸಿತ್ತು.

ಚೆನ್ನೈ ಐಒಸಿಯಿಂದನೈರುತ್ಯ ರೈಲ್ವೆ, ಹುಬ್ಬಳ್ಳಿಗೆ 17,880 ಲೀಟರ್‌ ಆಯಿಲ್‌ ಬಂದಿತ್ತು. ಆದರೆ, ಅದು ಶೆಡ್‌ಗೆ ಬರಲೇ ಇಲ್ಲ. ಆದರೆ, ಬಂದಂತೆ ದಾಖಲೆ ಸೃಷ್ಟಿಸಲಾಯಿತು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ₹ 22,10,153 ನಷ್ಟ ಮಾಡಲಾ
ಗಿದೆ ಎಂದು ಸಿಬಿಐ ದೂರಿತ್ತು.

ADVERTISEMENT

ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಸಿ. ಶ್ಯಾಮ ಪ್ರಸಾದ್‌, ಸಿಬಿಐ ಮಾಡಿರುವ ಆರೋಪ ಸಾಬೀತಾಗಿದೆ ಎಂದು ಹೇಳಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.