ADVERTISEMENT

ಡಾನ್‌ಗೂ ಕೊರೊನಾ ಭೀತಿ: ರವಿ ಪೂಜಾರಿಗೆ ಮಾಸ್ಕ್, ಗ್ಲೌಸ್ ನೀಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 14:51 IST
Last Updated 26 ಮಾರ್ಚ್ 2020, 14:51 IST
   

ಬೆಂಗಳೂರು: ಸೆನೆಗಲ್‌ನಲ್ಲಿ ಸಿಕ್ಕಿಬಿದ್ದು ನಗರಕ್ಕೆ ಕರೆತರಲಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ಮತ್ತೇ ಕಸ್ಟಡಿಗೆ ಪಡೆದಿದ್ದು, ಆತನಿಗೆ ಮಾಸ್ಕ್‌ ಹಾಗೂ ಗ್ಲೌಸ್ ನೀಡಲಾಗಿದೆ.

ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಸಂಬಂಧ ಈ ಹಿಂದೆಯೇ ಪೂಜಾರಿಯನ್ನು ಕಸ್ಟಡಿಗೆ ಪಡೆಯಲಾಗಿತ್ತು. ನಂತರ, ವೈಯಾಲಿ ಕಾವಲ್‌ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದರು. ಬಳಿಕ, ವೈಟ್‌ಫೀಲ್ಡ್‌ ಠಾಣೆಯಲ್ಲಿ ದಾಖಲಾಗಿದ್ದ ಬೆದರಿಕೆ ಕರೆ ಸಂಬಂಧ ಆತನನ್ನು ಪುನಃ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು.

ಅದರ ವಿಚಾರಣೆ ಮುಗಿಯುತ್ತಿದ್ದಂತೆ ಪೂಜಾರಿಯನ್ನು ಗುರುವಾರ ನ್ಯಾಯಾಧೀಶರಎದುರು ಹಾಜರುಪಡಿಸಲಾಯಿತು. 2009ರಲ್ಲಿ ಇಂದಿರಾನಗರದ ಬಿಲ್ಡರ್ ಕಚೇರಿ ಮೇಲೆ ನಡೆದ ದಾಳಿ ಪ್ರಕರಣ ಸಂಬಂಧ ‍ಪುನಃ ಆತನನ್ನು ಕಸ್ಟಡಿಗೆ ಪಡೆಯಲಾಗಿದೆ.

ADVERTISEMENT

ಈಗ ಎಲ್ಲೆಡೆ ಕೊರೊನಾ ವೈರಾಣು ಭೀತಿ ಇದೆ. ಹೀಗಾಗಿಯೇ ಪೂಜಾರಿಗೂ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ನೀಡಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿದ್ದು, ಪೂಜಾರಿಗೆ ಎರಡು ಬಾರಿ ಸ್ನಾನ ಮಾಡುವಂತೆ ಹೇಳಲಾಗುತ್ತಿದೆ. ನಿತ್ಯವೂ ವೈದ್ಯರಿಂದ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.