ಬೆಂಗಳೂರು: ಮಹಾರಾಷ್ಟ್ರದಿಂದ ವಾಪಸ್ ಆದವರಪೈಕಿ 186 ಮಂದಿ ಸೇರಿದಂತೆ ರಾಜ್ಯದಲ್ಲಿ ಶನಿವಾರ ಒಂದೇ ದಿನ 216 ಜನರು ಕೊರೊನಾ ಸೋಂಕಿತರಾಗಿದ್ದಾರೆ. ಈವರೆಗೆ ವರದಿಯಾದ ಒಂದು ದಿನದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ1,959ಕ್ಕೆ ಮುಟ್ಟಿದೆ.
ಅಲ್ಲಿಂದ ಬಂದವರು ಒಂದೇ ಸಮನೆ ಸೋಂಕಿತರಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಕೂಡ ಶುರುವಾಗಿದೆ. ಇನ್ನೊಂದೆಡೆ ಲಾಕ್ ಡೌನ್ ಸಡಿಲಿಸಿದ ಪರಿಣಾಮ ಸೋಂಕಿತರ ಪ್ರಯಾಣದ ಇತಿಹಾಸ ಹಾಗೂ ಸಂಪರ್ಕವನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.ಅಂತರ್ ರಾಜ್ಯ ಹಾಗೂ ಜಿಲ್ಲೆಗಳ ನಡುವೆ ಪ್ರಯಾಣಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸೋಂಕು ಇನ್ನಷ್ಟು ವ್ಯಾಪಿಸಿಕೊಳ್ಳುವ ಸಾಧ್ಯತೆಯಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯಕ್ಕೆ ಈವರೆಗೆ ವಾಪಸ್ ಬಂದು ಸೋಂಕಿತರಾದವರಲ್ಲಿ 712 ಮಂದಿ ಮಹಾರಾಷ್ಟ್ರದ ನಂಟನ್ನು ಹೊಂದಿದವರಾಗಿದ್ದಾರೆ.
ಯಾದಗಿರಿಯಲ್ಲಿ 72, ರಾಯಚೂರಿನಲ್ಲಿ 40, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 26, ಗದಗದಲ್ಲಿ 15, ಧಾರವಾಡದಲ್ಲಿ 5, ಹಾಸನದಲ್ಲಿ 4, ಬೆಂಗಳೂರಿನಲ್ಲಿ 4, ಉಡುಪಿಯಲ್ಲಿ 3, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿಯಲ್ಲಿ 3, ಬೀದರ್‌ನಲ್ಲಿ 3, ದಾವಣಗೆರೆಯಲ್ಲಿ 3, ಕೋಲಾರದಲ್ಲಿ 3, ಉತ್ತರ ಕನ್ನಡದಲ್ಲಿ 2 ಹಾಗೂ ಕಲಬುರ್ಗಿ, ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ಶನಿವಾರ ಹೊಸದಾಗಿ ವರದಿಯಾಗಿದೆ.
ಯಾದಗಿರಿಯಲ್ಲಿ ಸೋಂಕಿತರಾದವರೆಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅದರಲ್ಲಿ 10 ವರ್ಷದೊಳಗಿನ 13 ಮಕ್ಕಳು ಕೂಡ ಸೇರಿವೆ.ರಾಯಚೂರಿನಲ್ಲಿ ವರದಿಯಾದ ಪ್ರಕರಣಗಳಲ್ಲಿ 37 ಮಂದಿ ಅಲ್ಲಿಂದಲೇ ಬಂದವರಾಗಿದ್ದಾರೆ. ಉಳಿದ ಮೂವರಲ್ಲಿ ಒಬ್ಬರು ಆಂಧ್ರಪ್ರದೇಶದಿಂದ ಮರಳಿದ್ದರು. ರೋಗಿಯ ಸಂಪರ್ಕದಿಂದ 33 ವರ್ಷದ ಮಹಿಳೆ ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಬಾಲಕಿ ಸೋಂಕಿತರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಹೆಚ್ಚಿನ ಪ್ರಕರಣಗಳು ಹಾಗೂ ಚಿಕ್ಕಬಳ್ಳಾಪುರದಲ್ಲಿ ವರದಿಯಾದ ಅಷ್ಟೂ ಪ್ರಕರಣಗಳಿಗೆ ಮಹಾರಾಷ್ಟ್ರದ ನಂಟಿದೆ.ಮಹಾರಾಷ್ಟ್ರದಿಂದ ಗದಗಕ್ಕೆ ಬಂದವರ ಪೈಕಿ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಒಬ್ಬ ಸೋಂಕಿತ ರಾಜಸ್ಥಾನ ಪ್ರಯಾಣದ ಹಿನ್ನೆಲೆ, ಇಬ್ಬರು ಗುಜರಾತ್ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. 9 ಮಂದಿಗೆ ಬೇರೆ ರೋಗಿಯ ಸಂಪರ್ಕದಿಂದ ಸೋಂಕು ತಗುಲಿದೆ.
ಕಾನ್‌ಸ್ಟೆಬಲ್‌ಗೆ ಸೋಂಕು: ಬೆಂಗಳೂರಿನ ಸಂಚಾರಿ ಠಾಣೆಯೊಂದರ 34 ವರ್ಷದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿದೆ. ಕಂಟೈನ್‌ಮೆಂಟ್ ವಲಯವಾದ ಟಿಪ್ಪುನಗರದಲ್ಲಿ ಅವರು ಭದ್ರತೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಕಾನ್‌ಸ್ಟೆಬಲ್ ಅವರ ಪತ್ನಿ ಗರ್ಭಿಣಿಯಾಗಿದ್ದು, ಒಂದು ತಿಂಗಳ ಹಿಂದೆಯೇ ಊರಿಗೆ ಕಳುಹಿಸಿದ್ದರು. ಬೆಂಗಳೂರಿನಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಸೋಂಕಿತರಾಗಿದ್ದಾರೆ. ದೆಹಲಿಯಿಂದ ವಾಪಸ್ ಆದ 4 ತಿಂಗಳ ಮಗುವಿಗೂ ಸೋಂಕು ತಗುಲಿದೆ.
ಶನಿವಾರ ಒಂದೇ ದಿನ 9,670 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ 1,307 ರೋಗಿಗಳಲ್ಲಿ 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮೃತರ ಸಂಖ್ಯೆ 42ಕ್ಕೆ
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 32 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದರು. ಮೇ 19ರಂದು ಆಸ್ಪತ್ರೆಗೆ ದಾಖಲಿಸಿದಾಗ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಕೆಲ ವರ್ಷಗಳಿಂದ ಕ್ಷಯ ರೋಗದಿಂದಲೂ ಬಳಲುತ್ತಿದ್ದರು. ಇವರ ನಿಧನದೊಂದಿಗೆ ಸೋಂಕಿಗೆ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ವೈದ್ಯರಿಗೆ ಸೋಂಕು ಹಚ್ಚಿದ್ದ ಪ್ರಯೋಗಾಲಯ ಲೋಪ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ವೈದ್ಯಾಧಿಕಾರಿ ಅವರಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದ್ದು ಅವರು ನಿರಾಳರಾಗಿದ್ದಾರೆ.
ಪ್ರಯೋಗಾಲಯದ ಲೋಪದಿಂದಾಗಿ ಅವರಿಗೆ ಇದೇ 19ರಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಇರುವುದಾಗಿ ವರದಿ ಬಂದಿತ್ತು. ಬಳಿಕ ಆರು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ಸೋಂಕು ಅಂಟಿರಲಿಲ್ಲ ಎಂಬುದು ದೃಢಪಟ್ಟಿದೆ. ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದ 28 ಮಂದಿಯ ಪರೀಕ್ಷಾ ವರದಿ ಕೂಡ ಬಂದಿದ್ದು, ಎಲ್ಲರೂ ನಿರಾಳರಾಗಿದ್ದಾರೆ. ಅವರ ಸಂಪರ್ಕದಿಂದ ಕ್ವಾರಂಟೈನ್‌ಗೆ ಒಳಪಡಿಸಿದ್ದ 1,446 ಮಂದಿಯನ್ನೂ ಮನೆಗೆ ಕಳುಹಿಸಲಾಗುತ್ತಿದೆ.
ಪ್ರಯೋಗಾಲಯದ ದೋಷದಿಂದ ತಪ್ಪು ಮಾಹಿತಿ ನೀಡಿದ ಮೂರನೇ ಪ್ರಕರಣ ಇದಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಗರ್ಭಿಣಿ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗೆ ಸಂಬಂಧಿಸಿದ ವರದಿಯೂ ಲೋಪದಿಂದ ಕೂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.