ಬೆಂಗಳೂರು: ಬಿಜೆಪಿ ಸರ್ಕಾರದ ಕಮಿಷನ್ ಲೂಟಿಯು ರಾಜ್ಯದ ಜನರ ಬದುಕನ್ನೇ ಕಸಿಯುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದಾದ್ಯಂತಅಣೆಕಟ್ಟೆಗಳ ನಿರ್ಮಾಣ,ಆಧುನೀಕರಣಕ್ಕೆಸಾವಿರಾರು ಕೋಟಿ ರೂಪಾಯಿ ಅನುದಾನ ಖರ್ಚು ಮಾಡಲಾಗುತ್ತಿದೆಯಾದರೂ, ಹೊಲಗಳಿಗೆ ಮಾತ್ರ ಸಮರ್ಪಕವಾಗಿ ನೀರು ಹರಿದುಬರುತ್ತಿಲ್ಲ.ಕಳಪೆ ಕಾಮಗಾರಿ, ಭ್ರಷ್ಟಾಚಾರದ ಆರೋಪಗಳೂ ಕೇಳಿಬರುತ್ತಿವೆ ಎಂದು ಪ್ರಜಾವಾಣಿಯಲ್ಲಿ ಇಂದು (ಡಿಸೆಂಬರ್ 25ರಂದು) ವರದಿ ಪ್ರಕಟವಾಗಿದೆ.
'ಹಣದ ಹೊಳೆ: ಹೊಲಕ್ಕಿಲ್ಲ ನೀರು' ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ಗುಡುಗಿದೆ.
'ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಲೂಟಿಯು ರಾಜ್ಯದ ಜನರ ಬದುಕನ್ನೇ ಕಸಿಯುತ್ತಿದೆ.ಕೃಷ್ಣ ಮೇಲ್ದಂಡೆ ಯೋಜನೆಯ ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯಲ್ಲಿ ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ ನಡೆದು ರೈತರ ಹೊಲಕ್ಕೆ ನೀರು ಕಾಣದಾಗಿದೆ.ಹೀಗಿದ್ದೂ ತನಿಖೆ ನಡೆಸಲು, ಕ್ರಮ ಕೈಗೊಳ್ಳಲು ನೀರಾವರಿ ಸಚಿವರಿಗೆ ಮುಹೂರ್ತ ಕೂಡಿ ಬರಲಿಲ್ಲ!' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.