ADVERTISEMENT

Covid-19 Karnataka Update | 44 ಸಾವಿರ ದಾಟಿದ ಕೋವಿಡ್‌ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 14:41 IST
Last Updated 3 ಮೇ 2021, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಹೊಸದಾಗಿ 44,438 ಜನರಿಗೆ ಸೋಂಕು ತಗುಲುವುದರೊಂದಿಗೆರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,46,303 ದಾಟಿದೆ. ಈವರೆಗೂ ರಾಜ್ಯದಲ್ಲಿ 4,44,734 ಸಕ್ರಿಯ ಪ್ರಕರಣಗಳು ಇವೆ ಎಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 239 ಜನರು ಸಾವಿಗೀಡಾಗಿದ್ದು, ಈ ಮೂಲಕ ಒಟ್ಟಾರೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 16,250ಕ್ಕೆ ಏರಿಕೆಯಾಗಿದೆ.

ಈವರೆಗೆ 11,85,299 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಂದು ಗುಣಮುಖರಾಗಿ 20,901 ಜನರು ಬಿಡುಗಡೆಯಾಗಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಇಂದು ಹೊಸದಾಗಿ 22,112 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 5,17,770 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 8,19,404 ಕ್ಕೆ ಏರಿಕೆಯಾಗಿದೆ. ಇಂದು 115 ಜನರು ಮೃತಪಟ್ಟಿದ್ದು, ಈವರೆಗೂ 6,716 ಮಂದಿ ಸಾವಿಗೀಡಾಗಿದ್ದಾರೆ.

ಬಾಗಲಕೋಟೆಯಲ್ಲಿ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣ ಕನ್ನಡ 793, ದಾವಣಗೆರೆ 104, ಧಾರವಾಡ 1021, ಗದಗ 191, ಹಾಸನ 1673, ಹಾವೇರಿ 330, ಕಲಬುರಗಿ 1083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1367, ಮೈಸೂರು 2685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2361, ಉಡುಪಿ 529, ಉತ್ತರ ಕನ್ನಡ 776, ವಿಜಯಪುರ 274 ಮತ್ತು ಯಾದಗಿರಿಯಲ್ಲಿ 337 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.