ಬೆಂಗಳೂರು:ಕೊರೊನಾವೈರಸ್‌ನ ರೂಪಾಂತರ ತಳಿಯಾಗಿರುವ 'ಓಮೈಕ್ರಾನ್' ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ 10 ಪ್ರಯಾಣಿಕರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದೂರವಾಣಿ ಸಂಪರ್ಕಕ್ಕೂ ಸಿಗದ ಈ ಎಲ್ಲ ಪ್ರಯಾಣಿಕರುದಕ್ಷಿಣ ಆಫ್ರಿಕಾದಿಂದ ನವೆಂಬರ್ 12 ಮತ್ತು 22ರ ಅವಧಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಯಾವುದೇ ಪರಿಸ್ಥಿತಿಯನ್ನೂ ನಿಭಾಯಿಸಲು ಸಿದ್ಧವಿರುವುದಾಗಿ ತಿಳಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಸಂಪರ್ಕಕ್ಕೆ ಸಿಗದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಓಮೈಕ್ರಾನ್ ದೃಢಪಟ್ಟ ಎರಡು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರವು ಸೋಂಕು ಪ್ರಕರಣ ತಡೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇವನ್ನೂ ಓದಿ
*ಓಮೈಕ್ರಾನ್ ಪ್ರಸರಣ ತಡೆಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ: ಏನೇನಿದೆ?
*ಬೆಂಗಳೂರು ಮೂಲಕ ಭಾರತಕ್ಕೂ ಎಂಟ್ರಿ ಕೊಟ್ಟ ಓಮೈಕ್ರಾನ್:ಕರ್ನಾಟಕದ ಇಬ್ಬರಲ್ಲಿ ಪತ್ತೆ
*ಓಮೈಕ್ರಾನ್ ಹೊಮ್ಮಿದ ಬೋಟ್ಸ್ವಾನದಲ್ಲಿ ಸಿಲುಕಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ
*ಅಮೆರಿಕ: ಓಮೈಕ್ರಾನ್ ಮೊದಲ ಪ್ರಕರಣ ಪತ್ತೆ
*ಸಿಂಗಪುರ: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಓಮೈಕ್ರಾನ್ ಪತ್ತೆ
*ಜಿನೋಮ್ ಸೀಕ್ವೆನ್ಸಿಂಗ್, ಕಣ್ಗಾವಲು, ಲಸಿಕೆ ಓಮೈಕ್ರಾನ್ ವಿರುದ್ಧ ಅಸ್ತ್ರ: ತಜ್ಞರು
*ರಾಜ್ಯದಲ್ಲಿ ಓಮೈಕ್ರಾನ್ ಆತಂಕ: ತಜ್ಞರ ಸಭೆ ನಡೆಸಲಾಗುವುದು ಎಂದ ಸಿಎಂ ಬೊಮ್ಮಾಯಿ
*ದೇಶದಲ್ಲಿ ಓಮೈಕ್ರಾನ್ ಪ್ರಕರಣ: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಮಹಾರಾಷ್ಟ್ರ
*ನ್ಯೂಯಾರ್ಕ್ನಲ್ಲಿ ಓಮೈಕ್ರಾನ್ ರೂಪಾಂತರ ತಳಿಯ ಐದು ಪ್ರಕರಣ ಪತ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.