ADVERTISEMENT

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಹಸಿರು, ಕಪ್ಪು ಶಿಲೀಂಧ್ರ

ಸುರಕ್ಷಾ ಪಿ.
Published 2 ಜುಲೈ 2021, 3:58 IST
Last Updated 2 ಜುಲೈ 2021, 3:58 IST
ಪ್ರಾತಿನಿಧಿಕ ಚಿತ್ರ: ಪಿಟಿಐ
ಪ್ರಾತಿನಿಧಿಕ ಚಿತ್ರ: ಪಿಟಿಐ   

ಬೆಂಗಳೂರು: ಇಎನ್‌ಟಿ ತಜ್ಙರೊಬ್ಬರು 45 ವರ್ಷದ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ 'ಹಸಿರು ಶಿಲೀಂಧ್ರ' (ಆಸ್ಪರ್ಜಿಲಸ್ ಫ್ಯೂಮಿಗಾಟಸ್) ಮತ್ತು 'ಕಪ್ಪು ಶಿಲೀಂಧ್ರ'(ಮ್ಯೂಕರ್ ಮೈಕೊಸಿಸ್)ವನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ಮೂಲದ ಮಕ್ಕಳ ವೈದ್ಯ ಕಾರ್ತಿಕೇಯನ್ ಆರ್ ಅವರಿಗೆ ನಿರಂತರ ತಲೆನೋವು ಮತ್ತು ಕೆನ್ನೆಯ ಮರಗಟ್ಟುವಿಕೆ ಸಮಸ್ಯೆ ಇತ್ತು. ಸಿಟಿ ಸ್ಕ್ಯಾನ್‌ನಲ್ಲಿ ಸೈನಸ್ ಮತ್ತು ಕಣ್ಣಿನ ಕೆಳಭಾಗದಲ್ಲಿ ಶಿಲೀಂಧ್ರಗಳು ಇರುವುದು ಕಂಡುಬಂದಿದೆ.

ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ಪ್ರಶಾಂತ್ ಆರ್ ರೆಡ್ಡಿ ಅವರು ಜೂನ್ ಮೊದಲ ವಾರದಲ್ಲಿ ರೋಗಿಯ ಮೈಕ್ರೋ ಬಯಾಲಜಿ ವರದಿಯನ್ನು ಪಡೆದಿದ್ದಾರೆ.

ADVERTISEMENT

‘ನಾನು ಶಸ್ತ್ರಚಿಕಿತ್ಸೆ ನಡೆಸಿದಾಗ, ಇದು ಕೇವಲ ಕಪ್ಪು ಶಿಲೀಂಧ್ರವಲ್ಲ ಎಂದು ನನಗೆ ಗೊತ್ತಾಯಿತು. ಸೈನಸ್ ರಂಧ್ರದೊಳಗೆ ಹಸಿರು ಬಣ್ಣದ ಶಿಲೀಂಧ್ರ ಪತ್ತೆಯಾಗಿದೆ’ಎಂದು ಡಾ ರೆಡ್ಡಿ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದರು. ಆತಂಕಕಾರಿ ಸಂಗತಿಯೆಂದರೆ ಆಸ್ಪರ್ಜಿಲೊಸಿಸ್ ಸಾಮಾನ್ಯವಾಗಿದ್ದರೂ, ಈ ಜಾತಿಯ ಶಿಲೀಂಧ್ರವು ಸಾಮಾನ್ಯವಲ್ಲ ಎಂದು ವೈದ್ಯರು ಹೇಳಿದ್ದಾರೆ.

‘ಆಸ್ಪರ್ಜಿಲೊಸಿಸ್ ಹಸಿರು ಬಣ್ಣದಲ್ಲಿರುವುದು ಸಾಮಾನ್ಯವಲ್ಲ, ಇದು ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಮಣ್ಣಿನಲ್ಲಿ ಮಾತ್ರ ಇರುತ್ತದೆ. ಕೋವಿಡ್ ನಂತರ, ಸೈನಸ್‌ಗಳ ಲೋಳೆಪೊರೆಯು ಕೊಲ್ಲಲ್ಪಡುತ್ತದೆ. ಅದು ಆಹಾರವಾಗಿರಲಿ ಅಥವಾ ಮಾನವ ದೇಹವಾಗಿದ್ದರೂ ಸರಿ ಯಾವುದೇ ಸತ್ತ ಅಂಗಾಂಶವು ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುತ್ತದೆ,’ಎಂದು ಅವರು ಹೇಳಿದರು.

ಏಪ್ರಿಲ್ 24 ರಂದು ಕಾರ್ತಿಕೇಯನ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು.ಇತರ ಇಬ್ಬರು ಸೋಂಕಿತ ಸ್ನೇಹಿತರೊಂದಿಗೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಐದು ದಿನಗಳ ನಂತರ, ಅವರ ಆಮ್ಲಜನಕದ ಮಟ್ಟವು ಕಡಿಮೆಯಾಯಿತು. ಮಧುಮೇಹ ಸಮಸ್ಯೆ ಇದ್ದ ಅವರನ್ನು ಮೇ 6 ರಂದು ಐಸಿಯುಗೆ ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.