ಬೆಂಗಳೂರು: ಕೋವಿಡ್ ಲಸಿಕೆ ಪೂರೈಕೆ ತಡವಾಗುತ್ತಿರುವುದರಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ಮೇ ಮೂರನೇ ವಾರದಿಂದ ಲಸಿಕೆ ಅಭಿಯಾನ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಗಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಈಗಾಗಲೇ 1 ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಅಲ್ಲದೆ ಇನ್ನೂ 1 ಕೋಟಿ ಡೋಸ್‌ಗೆ ಕಾರ್ಯಾದೇಶ ನೀಡಲಾಗಿದೆ.
ಹೆಚ್ಚುವರಿ ಲಸಿಕೆ ಉತ್ಪಾದನೆ ಆರಂಭಿಸಿದ್ದು, ಮೇ ಎರಡನೇ ವಾರ ಮೊದಲ ಬ್ಯಾಚ್‌ನ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ತಯಾರಿಕೆ ಕಂಪನಿಗಳು ಮೇ ಎರಡನೇ ವಾರದ ಬಳಿಕ ಪೂರೈಕೆ ಮಾಡುವುದಾಗಿ ಹೇಳಿವೆ. ಅದಕ್ಕೂ ಮೊದಲು 10 ಲಕ್ಷ ಡೋಸ್‌ಗಳಂತೆ ಪೂರೈಕೆ ಆರಂಭಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದರು.
ಕೋವಿಡ್ ಕಾರ್ಯಕರ್ತರು ಮತ್ತು ಹಿರಿಯ ನಾಗರೀಕರಿಗೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಈಗ 5 ಲಕ್ಷ ಡೋಸ್‌ಗಳು ಲಭ್ಯತೆ ಇವೆ. ನಾಳೆ 10 ಲಕ್ಷ ಡೋಸ್ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಾಲ್ಕನೇ ಹಂತದಲ್ಲಿ ಇದೀಗ ದೇಶದ ಜನಸಂಖ್ಯೆಯ ಅತಿ ದೊಡ್ಡ ಸಮೂಹದ ಲಸಿಕೆ ಕಾರ್ಯಕ್ರಮದ ಸಮಯ ಬಂದಿದೆ. ಲಸಿಕೆ ಖರೀದಿ ಮತ್ತು ಅನುಷ್ಠಾನ ಕಾರ್ಯವನ್ನು ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ. ನಾಲ್ಕನೇ ಹಂತದ ಲಸಿಕಾ ಆಭಿಯಾನ ಹಂತ ಹಂತವಾಗಿ ನಡೆಸಲಾಗುವುದು. ಔಷಧ ಕಂಪನಿಗಳು ಹೆಚ್ಚಿರುವ ಈ ಬೇಡಿಕೆಗೆ ತಕ್ಕಂತೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.