ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಕೆನೆಪದರ ನೀತಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ದಲಿತರಲ್ಲೇ ದನಿ ಇಲ್ಲದವರಿಗೆ ಹೊಸಬೆಳಕು ನೀಡಿದೆ’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಹೇಳಿದ್ದಾರೆ.
‘ಕೆನೆಪದರ ನೀತಿ ಜಾರಿಗಾಗಿ ಸುಪ್ರೀಂ ಕೋರ್ಟ್ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ನಮ್ಮದು ಪ್ರಮುಖ ಅರ್ಜಿ. ಮೀಸಲಾತಿಯು ಕೆಲವು ಸಮುದಾಯಗಳಿಗಷ್ಟೇ ದೊರೆತು, ದಲಿತರಲ್ಲೇ ಹಲವರು ಹಿಂದುಳಿದಿದ್ದಾರೆ. ಮೀಸಲಾತಿಯ ಪ್ರಯೋಜನ ದೊರೆತವರು ಮತ್ತು ಮೀಸಲಾತಿ ಸಿಗದೇ ಇರುವವರ ಮಧ್ಯೆ ಅಂತರ ಇದೆ ಎಂಬುದನ್ನು ಅಂಕಿ–ಅಂಶ ಸಮೇತ ಸುಪ್ರೀಂ ಕೋರ್ಟ್‌ಗೆ ವಿವರಿಸಿದ್ದೆವು’ ಎಂದಿದ್ದಾರೆ.
‘ಪರಿಶಿಷ್ಟರ ಮೀಸಲಾತಿಯಲ್ಲೂ ಕೆನೆಪದರ ನೀತಿಯನ್ನು ಜಾರಿಗೆ ತಂದು, ಒಂದು ತಲೆಮಾರಿಗಷ್ಟೇ ಮೀಸಲಾತಿ ದೊರೆಯುವಂತೆ ಮಾಡಬೇಕು. ಪರಿಶಿಷ್ಟರಲ್ಲಿ ಕೆನೆಪದರವನ್ನು ಗುರುತಿಸಲು, ಒಬಿಸಿಯಲ್ಲಿ ಕೆನೆಪದರ ಗುರುತಿಸುವುದಕ್ಕಿಂತ ಭಿನ್ನವಾದ ಮಾನದಂಡವನ್ನು ರೂಪಿಸಬೇಕು ಎಂದು ನ್ಯಾಯಮೂರ್ತಿ ಗವಾಯಿ ಅವರು ತೀರ್ಪು ನೀಡಿದ್ದಾರೆ. ಈ ತೀರ್ಪು ನಮ್ಮ ಹೋರಾಟಕ್ಕೆ ಸಿಕ್ಕ ಜಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.