ADVERTISEMENT

ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 6:23 IST
Last Updated 24 ಏಪ್ರಿಲ್ 2021, 6:23 IST
ಕ್ರಿಕೆಟ್‌ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ
ಕ್ರಿಕೆಟ್‌ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ    

ಚಿಕ್ಕಮಗಳೂರು: ಕ್ರಿಕೆಟ್‌ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ (67) ಅವರು ಕಡೂರಿನ ಚೇತನ್ ನರ್ಸಿಂಗ್ ಹೋಮ್ ನಲ್ಲಿ ಶುಕ್ರವಾರ ರಾತ್ರಿ ನಿಧನರಾದರು.ಅವರಿಗೆ ಇದೇ 20ರಂದು ಕೋವಿಡ್ ಧೃಢ ಪಟ್ಟಿತ್ತು.

ಮನೆಯಲ್ಲಿ ನಿಗಾ ವ್ಯವಸ್ಥೆಯಲ್ಲಿ ಇದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಅವರಿಗೆ ಪತಿ ಎಸ್‌ ಜಿಕೆ ಮೂರ್ತಿ, ವೇದಾ ಸೇರಿಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಬೀರೂರು ಮಾರ್ಗದಲ್ಲಿನ ತೋಟದಲ್ಲಿ ಶನಿವಾರಅಂತ್ಯಕ್ರಿಯೆ ನೆರವೇರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.