ADVERTISEMENT

ಅಪರಾಧ ಪ್ರಕರಣಗಳ ಹೆಚ್ಚಳ: ಗೃಹ ಇಲಾಖೆ ನಿದ್ದೆ ಮಾಡುತ್ತಿದೆಯೇ –ಜೆಡಿಎಸ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:47 IST
Last Updated 18 ಮೇ 2024, 15:47 IST
<div class="paragraphs"><p>ಜೆಡಿಎಸ್‌</p></div>

ಜೆಡಿಎಸ್‌

   

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳ ಕುರಿತು ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟವಾದ ‘430 ಕೊಲೆ, 198 ಅತ್ಯಾಚಾರ’ ವರದಿಯನ್ನು ತನ್ನ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಜೆಡಿಎಸ್‌, ‘ಗೃಹ ಇಲಾಖೆ ಕೆಲಸ ಮಾಡುತ್ತಿದೆಯಾ ಅಥವಾ ನಿದ್ದೆ ಮಾಡುತ್ತಿದೆಯಾ’ ಎಂದು ಪ್ರಶ್ನಿಸಿದೆ.

‘ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿದೆ. ಹಾದಿಬೀದಿಗಳಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೊಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆಗೆ ಕಡಿವಾಣವೇ ಇಲ್ಲ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ಜನರಿಗೆ ಇಲ್ಲ ನೆಮ್ಮದಿಯ ಗ್ಯಾರಂಟಿ’ ಎಂದು ಟೀಕಿಸಿದೆ.

ADVERTISEMENT

ತನ್ನ ‘ಎಕ್ಸ್‌’ ಖಾತೆಯಲ್ಲಿ ಖಾಲಿ ಕುರ್ಚಿ ಚಿತ್ರ ಪ್ರಕಟಿಸಿರುವ ಬಿಜೆಪಿ, ‘ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಲು ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ’ ಎಂದು ‘ಟ್ಯಾಗ್‌ ಲೈನ್‌’ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.