ಮಂಗಳೂರು: ಸತ್ಯ ಹೇಳುವವರು ಆಕ್ರೋಶಕ್ಕೆ ತುತ್ತಾಗಿತ್ತಾರೆ. ಕರ್ನಾಟಕಕ್ಕೆ ಬೆಂಕಿ ಹಾಕುತ್ತೇನೆ ಎನ್ನುವವರು ಮಹಾತ್ಮರಾಗುತ್ತಾರೆ. ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತಾರೆ ಎಂದು ಸಚಿವ ಸಿ.ಟಿ. ರವಿಪ್ರತಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.
ಮಂಗಳೂರಿನಲ್ಲಿ ನಡೆದ ಗಲಭೆ ಕುರಿತು ಸಿಸಿಟಿವಿ ದೃಶ್ಯಗಳಿಂದ ಇದೊಂದು ಪೂರ್ವಯೋಜಿತ ಕೃತ್ಯ ಎಂದು ತಿಳಿದು ಬಂದಿದೆ. ಪೊಲೀಸರ ಕ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದರು.
ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಕೊಟ್ಟರೆ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗುತ್ತದೆ. ಪರಿಹಾರ ಪ್ರಚೋದನೆ ಆಗಬಾರದು. ಸತ್ತವರ ಬಗ್ಗೆ ಅನುಕಂಪ ಇದೆ. ಸತ್ತವರು ಅಮಾಯಕರು ಎಂಬ ಪ್ರಮಾಣಪತ್ರ ನೀಡಲಾಗದು. ಪರಿಹಾರಕ್ಕಾಗಿಯೇ ಗಲಭೆ ಮಾಡಿದ್ದಾರೆ ಎಂದೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ...ತಾಯಿ ಅನುಮಾನಿಸುವ ಸ್ಥಿತಿಗೆ ಕಾಂಗ್ರೆಸ್: ಸಿ.ಟಿ.ರವಿ
ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.