ADVERTISEMENT

ಸಭಾಧ್ಯಕ್ಷ ಸ್ಥಾನ ಮಸೀದಿ ಮೌಲ್ವಿ ಹುದ್ದೆಯಲ್ಲ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 12:37 IST
Last Updated 18 ನವೆಂಬರ್ 2023, 12:37 IST
<div class="paragraphs"><p>Kh</p></div>

Kh

   

ಉಡುಪಿ: ‘ವಿಧಾನ ಸಭಾಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ. ಅದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಸಚಿವ ಜಮೀರ್‌ ಹೇಳಿಕೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಸಭಾಧ್ಯಕ್ಷ ಹುದ್ದೆಗೆ ಸಿಗುವ ಗೌರವ ಜಾಮಿಯಾ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ಬಿಜೆಪಿಯವರು ಮೌಲ್ವಿಗೆ ಜೀ ಹುಜೂರ್‌ ಎನ್ನುತ್ತಿಲ್ಲ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ’ ಎಂದರು.

ADVERTISEMENT

‘ಸಂವಿಧಾನ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗುವುದು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಘನತೆಯನ್ನು ಹಾಳು ಮಾಡಬೇಡಿ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.