ಬೆಂಗಳೂರು: ‘ಕಬ್ಬನ್ ಪಾರ್ಕ್ ಒಳಗೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವಕೀಲರ ಪರಿಷತ್ ಕಟ್ಟಡ ನೆಲಸಮ ಮಾಡಿ ಆ ಸ್ಥಳದಲ್ಲಿ ಏಳು ಮಹಡಿಗಳ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಅಸ್ತು ಎಂದಿರುವ ಏಕಸದಸ್ಯ ನ್ಯಾಯಪೀಠದ ಆದೇಶ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಕಬ್ಬನ್ ಪಾರ್ಕ್ನಡಿಗೆದಾರರ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದೆ.
ಸಂಘದ ಅಧ್ಯಕ್ಷ ಎಸ್.ಉಮೇಶ್ ಅರ್ಜಿದಾರರಾಗಿದ್ದು, ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಬ್ಬನ್ ಪಾರ್ಕ್ ಉಪ ನಿರ್ದೇಶಕರು, ಬಿಡಿಎ, ಬಿಬಿಎಂಪಿ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
‘ಉದ್ದೇಶಿತ ಕಟ್ಟಡ ನಿರ್ಮಾಣಗೊಂಡರೆ ಅದರಿಂದ ಸುತ್ತಲ ಪರಿಸರ ಹಾಳಾಗುತ್ತದೆ ಮತ್ತು ರಕ್ಷಣೆ ದೃಷ್ಟಿಯಿಂದಲೂ ಕಟ್ಟಡ ಅಪಾಯಕಾರಿಯಾಗಬಲ್ಲುದು. ಆದ್ದರಿಂದ ಸರ್ಕಾರದ ಪ್ರಸ್ತಾವನೆಗೆ ಪರವಾನಗಿ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.