ಬೆಂಗಳೂರು: ಸಮಾರಂಭವೊಂದರಲ್ಲಿ ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಕಾಲಡಿಯಲ್ಲಿ ನೋಟುಗಳ ರಾಶಿ ಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನೋಟುಗಳನ್ನು ತೂರಿರುವ ಸಂದರ್ಭದಲ್ಲಿ ಸಚಿವರೂ ಉಪಸ್ಥಿತರಿದ್ದರು. ಈ ವಿಡಿಯೊ ಹಂಚಿಕೊಂಡಿರುವ ವಿರೋಧ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶಿವಾನಂದ ಪಾಟೀಲರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, ‘ತೆಲಂಗಾಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ನಾನೊಬ್ಬನೇ ಅಲ್ಲಿರಲಿಲ್ಲ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ರಹೀಂ ಖಾನ್ ಕೂಡ ಇದ್ದರು. ನನ್ನ ವಿಡಿಯೊ ಹಂಚಿಕೊಂಡು ಟೀಕಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಾರ್ಯಕ್ರಮದ ಆಯೋಜಕರು ಹಾಗೆ ಮಾಡಿದ್ದಾರೆ. ನಾನು ಅಲ್ಲಿ ಅತಿಥಿಯಾಗಿದ್ದೆ. ಅವರ ಸಂಸ್ಕೃತಿಯನ್ನು ಬದಲಿಸಲು ನನಗೆ ಸಾಧ್ಯವೆ? ಸ್ನೇಹಿತರ ಮಗನ ಮದುವೆಗೆ ನಾನು ಹೋಗಲೇಬಾರದಾ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.