ಬೆಂಗಳೂರು: ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 2.75ರಷ್ಟು ಹೆಚ್ಚಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. 2019ರ ಜನವರಿ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ.
ಮೂಲವೇತನದಲ್ಲಿ ಸದ್ಯ ಶೇ 3.75ರಷ್ಟು ಇದ್ದ ತುಟ್ಟಿಭತ್ಯೆಯನ್ನು ಶೇ 6.50ಕ್ಕೆ ಏರಿಕೆ ಮಾಡಲಾಗಿದೆ. ಏಪ್ರಿಲ್ ತಿಂಗಳ ವೇತನದ ಜತೆಗೆ ಹೆಚ್ಚಳಗೊಂಡ ತುಟ್ಟಿಭತ್ಯೆ ನೌಕರರ ಕೈ ಸೇರಲಿದೆ.
ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರು, ಸರ್ಕಾರದ ಸಹಾಯಧನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಪೂರ್ಣವಾಧಿ ನೌಕರರಿಗೆ, ನಿವೃತ್ತಿ ವೇತನದಾರರಿಗೂ ತುಟ್ಟಿಭತ್ಯೆ ಹೆಚ್ಚಳ ಹೆಚ್ಚಳವಾಗಲಿದೆ.
‘ಕೇಂದ್ರ ಸರ್ಕಾರ ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದೆ, ರಾಜ್ಯ ಸರ್ಕಾರವೂ ಹೆಚ್ಚು ಕಡಿಮೆ ಅದೇ ಪ್ರಮಾಣದ ತುಟ್ಟಿಭತ್ಯೆ ನೀಡಿರುವುದು ಸಂತಸ ತಂದಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.