ADVERTISEMENT

ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ ನಿಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 12:57 IST
Last Updated 25 ಜೂನ್ 2024, 12:57 IST
<div class="paragraphs"><p>ರಾವಸಾಹೇಬ ಪಾಟೀಲ</p></div>

ರಾವಸಾಹೇಬ ಪಾಟೀಲ

   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ, ಸಹಕಾರ ಧುರೀಣ ರಾವಸಾಹೇಬ ಪಾಟೀಲ (80) ಮಂಗಳವಾರ ನಿಧನರಾದರು.

ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದಲ್ಲಿ ಅರಿಹಂತ ಉದ್ಯೋಗ ಸಮೂಹದ ಅಡಿಯಲ್ಲಿ ಅರಿಹಂತ ಕ್ರೆಡಿಟ್ ಸೌಹಾರ್ದ ಸಂಸ್ಥೆ, ಅರಿಹಂತ ಜವಳಿ ಮಿಲ್, ಅರಿಹಂತ ಸಕ್ಕರೆ ಕಾರ್ಖಾನೆ, ಆರ್.ಎ. ಪಾಟೀಲ ಪ್ರಾಥಮಿ, ಪ್ರೌಢಶಾಲೆ ತೆರೆದಿದ್ದಾರೆ.

ADVERTISEMENT

1944ರ ಏಪ್ರಿಲ್ 11ರಂದು ರೈತ ಕುಟುಂಬದಲ್ಲಿ ಜನಿಸಿದ ಅವರು ಐದು ದಶಕಗಳವರೆಗೆ ಸಮಾಜಮುಖಿ ಕಾರ್ಯ ಮಾಡಿದರು. ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷರಾದ ಬಳಿಕ ನಿಪ್ಪಾಣಿ ಸಮೀಪದ ಸ್ತವನಿಧಿ ಜೈನ ಕ್ಷೇತ್ರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಲ್ಲಿ ಜೈನ ಧರ್ಮದ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದರು. ಕರ್ನಾಟಕ– ಮಹಾರಾಷ್ಟ್ರ ರಾಜ್ಯಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಅವರು ಪ್ರಭಾವ ಹೊಂದಿದ್ದರು.

ಪಾರ್ಥಿವ ಶರೀರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಅರಿಹಂತ ಶಾಲೆ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅವರರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.

ರಾವಸಾಹೇಬ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.