ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ 228 ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 6:51 IST
Last Updated 28 ಜೂನ್ 2020, 6:51 IST
   

ಮಂಗಳೂರು: ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿರುವ ಮತ್ತು ಸದ್ಯದಲ್ಲೇ ಪೂರ್ಣಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲೆಯ 248 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಮೂಡುಬಿದಿರೆ ತಾಲ್ಲೂಕಿನ 12, ಪುತ್ತೂರು ತಾಲ್ಲೂಕಿನ 22, ಸುಳ್ಯ ತಾಲ್ಲೂಕಿನ 25, ಬಂಟ್ವಾಳ ತಾಲ್ಲೂಕಿನ 60, ಕಡಬ ತಾಲ್ಲೂಕಿನ 21, ಬೆಳ್ತಂಗಡಿ ತಾಲ್ಲೂಕಿನ 46 ಮತ್ತು ಮಂಗಳೂರು ತಾಲ್ಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಈ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿಯು ಭಾನುವಾರದಿಂದ (ಜೂನ್‌ 28) ಜುಲೈ 29ರವರೆಗೆ ಹಂತ ಹಂತವಾಗಿ ಕೊನೆಗೊಳ್ಳಲಿದೆ. ನೂತನ ಸದಸ್ಯರ ಆಯ್ಕೆ ಆಗುವವರೆಗೂ ಆಡಳಿತಾಧಿಕಾರಿಗಳೇ ಪಂಚಾಯಿತಿ ಆಡಳಿತದ ನೇತೃತ್ವ ವಹಿಸಿರುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.