ADVERTISEMENT

ಸಾಲ ಮನ್ನಾ, ನೀರಾವರಿಗೆ ₹1.25 ಲಕ್ಷ ಕೋಟಿ ವೆಚ್ಚಕ್ಕೆ ಸಮನ್ವಯ ಸಮಿತಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 13:21 IST
Last Updated 1 ಜುಲೈ 2018, 13:21 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು, ನೀರಾವರಿ ಕ್ಷೇತ್ರಕ್ಕೆ 5 ವರ್ಷಗಳಿಗೆ ₹1.25 ಲಕ್ಷ ಕೋಟಿ ಖರ್ಚು ಮಾಡಲು ಕಾಂಗ್ರೆಸ್- ಜೆಡಿಎಸ್ ಸಮನ್ವಯ ಸಮಿತಿ ಸಭೆ ಭಾನುವಾರಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಜೆಡಿಎಸ್ ರಾಷ್ಟ್ರೀಯ ವಕ್ತಾರ ಡ್ಯಾನಿಷ್ ಅಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರೈತರು ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಲಾಗುತ್ತದೆ. ಈ ಕುರಿತ ವಿವರಗಳನ್ನು ಬಜೆಟ್‌ನಲ್ಲಿ ನೀಡಲಾಗುತ್ತದೆ ಎಂದರು.

ADVERTISEMENT

ರಾಜ್ಯದಲ್ಲಿ ವಸತಿ ರಹಿತರಿಗಾಗಿ 20 ಲಕ್ಚ ಮನೆಗಳನ್ನು ಐದು ವರ್ಷಗಳಲ್ಲಿ ಕಟ್ಟಿ ಕೊಡಲು ತೀರ್ಮಾನಿಸಲಾಯಿತು. ಐದು ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗ ಸ್ರಷ್ಟಿಸಲು ಉದ್ದೇಶಿಸಲಾಗಿದೆ. ಕೌಶಲ ಅಭಿವೃದ್ಧಿ ಯೋಜನೆಯಡಿ ಇದಕ್ಕೆ ಒತ್ತು ನೀಡಲಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಯಾಗಿದ್ದ ‘ಆರೋಗ್ಯ ಕರ್ನಾಟಕ’ವನ್ನು ಮುಂದುವರಿಸಲು ತಿರ್ಮಾನಿಸಲಾಗಿದೆ.ವಿಧಾನಮಂಡಲದ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಆಗಲಿದೆ. ನಿಗಮ ಮಂಡಳಿಗಳಿಗೆ ನೇಮಕದ ಬಗ್ಗೆ ಪಟ್ಟಿ ಆಷ್ಟು ಬೇಗ ಅಂತಿಮಗೊಳಿಸಲು ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಪೂರ್ಣ ಪ್ರಮಾಣ ಬಜೆಟ್ ಮಂಡಿಸಲಿದ್ದಾರೆ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ವಿರೋಧವಿಲ್ಲ: ಸರ್ಕಾರದಲ್ಲಿಗೊಂದಲವಿದೆ ಎಂದು ಮಾಧ್ಯಗಳಲ್ಲಿ ಊಹಾಪೋಹ ಹರಡಿತ್ತು. ಆದರೆ, ಅಂಥದ್ದೇನು ಆಗಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವರಿ ಕೆ.ಸಿ.ವೇಣುಗೋಪಾಲ್‌ ಹೇಳಿದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಮನ್ವಯ ಸಮಿತಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ರೈತರ ಸಾಲದ ಬಗ್ಗೆ ಕಾಂಗ್ರೆಸ್ ವಿರೋಧವಿಲ್ಲ. ರಾಹುಲ್ ಗಾಂಧಿ ಕೂಡ ಸಾಲ ಮನ್ನಾ ಒಪ್ಪಿಗೆ ಸೂಚಿಸಿದ್ದರು. ನಾವು ಕೂಡ ಶಿಫಾರಸು ಮಾಡಿದ್ದೇವೆ’ ಎಂದು ತಿಳಿಸಿದರು.

ಮೈತ್ರಿ ಪಕ್ಷಗಳಲ್ಲಿ ಒಂದೇ ಮನಸ್ಥಿತಿ ಇದೆ. ಮಂತ್ರಿಗಳು ಇಲಾಖೆಯ ಜವಾಬ್ದಾರಿ ನಿಭಾಯಿಸಲಿದ್ದಾರೆ ಸರ್ಕಾರಕ್ಕೊಂದು ಮಾರ್ಗಸೂಚಿ ಇದೆ. ಗೊಂದಲ ರಹಿತವಾಗಿ ಸರ್ಕಾರ ನಡೆಯುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

ಇದೇ ವೇಳೆ ಸಚಿವ ಅವರು ಇಲಾಖೆ ವಿಷಯ ಬಿಟ್ಟು ಬೇರೆ ವಿಷಯ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.