ADVERTISEMENT

‘ಡೆಕ್ಕನ್ ಹೆರಾಲ್ಡ್ ಮಾಸ್ಟರ್‌ಮೈಂಡ್’ ಆವೃತ್ತಿ ಬಿಡುಗಡೆ ಮಾಡಿದ ಪಂಕಜ್ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 18:48 IST
Last Updated 9 ಜೂನ್ 2023, 18:48 IST
‘ಡೆಕ್ಕನ್ ಹೆರಾಲ್ಡ್ ಮಾಸ್ಟರ್‌ಮೈಂಡ್ ಡೈಲಿ’ ಆವೃತ್ತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ಟಿಪಿಎಂಎಲ್ ನಿರ್ದೇಶಕ ಚೈತನ್ಯ ನೆಟ್ಟಕಲ್ಲಪ್ಪ, ಸ್ನೂಕರ್ ಚಾಂಪಿಯನ್ ಪಂಕಜ್‌ ಅಡ್ವಾಣಿ, ಸಿಇಒ ಸೀತಾರಾಮನ್ ಶಂಕರ್ ಇದ್ದರು.
‘ಡೆಕ್ಕನ್ ಹೆರಾಲ್ಡ್ ಮಾಸ್ಟರ್‌ಮೈಂಡ್ ಡೈಲಿ’ ಆವೃತ್ತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ಟಿಪಿಎಂಎಲ್ ನಿರ್ದೇಶಕ ಚೈತನ್ಯ ನೆಟ್ಟಕಲ್ಲಪ್ಪ, ಸ್ನೂಕರ್ ಚಾಂಪಿಯನ್ ಪಂಕಜ್‌ ಅಡ್ವಾಣಿ, ಸಿಇಒ ಸೀತಾರಾಮನ್ ಶಂಕರ್ ಇದ್ದರು.   

ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್ ಮಾಸ್ಟರ್‌ಮೈಂಡ್ ಡೈಲಿ’ ಆವೃತ್ತಿಯನ್ನು ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿ, ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಶುಕ್ರವಾರ ಬಿಡುಗಡೆ ಮಾಡಿದರು.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಹೊಸಪೇಟೆ ಮತ್ತು ಕಲಬುರಗಿಯ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಜೂನ್ 12ರಿಂದ ಅಧಿಕೃತವಾಗಿ ವಿತರಣೆ ಪ್ರಾರಂಭವಾಗಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ ಐದು ದಿನಗಳು ‘ಡೆಕ್ಕನ್ ಹೆರಾಲ್ಡ್ ಮಾಸ್ಟರ್‌ಮೈಂಡ್ ಡೈಲಿ’ ಪ್ರಕಟವಾಗಲಿದೆ. ಪ್ರಸ್ತುತ ವಿದ್ಯಮಾನಗಳಾದ ಆರ್ಥಿಕತೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ನಾಗರಿಕ ವ್ಯವಹಾರಗಳು ಮತ್ತು ಪರಿಸರದಂತಹ ವಿವಿಧ ಕ್ಷೇತ್ರಗಳಿಗೆ ಪ್ರಾಮುಖ್ಯ ನೀಡಲಾಗಿದೆ. ಆಕರ್ಷಕ ಗ್ರಾಫಿಕ್ಸ್ ಮೂಲಕ ವಿನ್ಯಾಸಗಳಿರುತ್ತವೆ. ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಫಝಲ್ಸ್‌, ಎಂಸಿಕ್ಯೂಗಳಿರಲಿವೆ. 

ADVERTISEMENT

ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿ ಇರುವವರ ಬಗ್ಗೆ, ವಿದ್ಯಮಾನಗಳ ಬಗ್ಗೆ ಮಾಹಿತಿ,  ಸ್ಟ್ಯಾಂಡ್‌ ಅಲೋನ್‌ ಚಾರ್ಟ್‌ಗಳು, ಸಾಂದರ್ಭಿಕ ಚಿತ್ರಗಳನ್ನು ಮಾಸ್ಟರ್‌ಮೈಂಡ್‌ ಒಳಗೊಂಡಿರಲಿದೆ.

ಬಹುಮಾನ ವಿತರಣೆ: ಡಿಎಚ್‌/ಪಿವಿ ಮಾಸ್ಟರ್‌ ಮೈಂಡ್‌ ಚಂದಾದಾರಿಕೆಯ ಲಕ್ಕಿ ಡ್ರಾ ವಿಜೇತರಿಗೆ ಶುಕ್ರವಾರ ಬಹುಮಾನ ವಿತರಿಸಲಾಯಿತು. ಚಿನ್ಮಯಿ ರಾಜ್‌ ಎಂ.ಆರ್‌. ಅವರು ಬಂಪರ್‌ ಬಹುಮಾನ ಎಲೆಕ್ಟ್ರಿಕಲ್‌ ಬೈಕ್‌ ಪಡೆದರು. ಮೊಬೈಲ್‌ ಫೋನ್‌, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ ವಾಚ್‌ಗಳನ್ನು ಹಲವರು ಪಡೆದರು.

ಟಿಪಿಎಂಎಲ್ ನಿರ್ದೇಶಕ ಚೈತನ್ಯ ನೆಟ್ಟಕಲ್ಲಪ್ಪ, ಸಿಇಒ ಸೀತಾರಾಮನ್ ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.