ನವದೆಹಲಿ: ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವ ಯೋಜನೆಗಳಿಗೆ ರಕ್ಷಣಾ ಇಲಾಖೆ ಹೆಚ್ಚುವರಿ ಭೂಮಿ ಒದಗಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈಜಿಪುರ ರಿಂಗ್ ರಸ್ತೆಯಿಂದ ಸರ್ಜಾಪುರ ಮುಖ್ಯ ರಸ್ತೆ ವರೆಗೆ ನೂತನ ರಸ್ತೆ ನಿರ್ಮಿಸಲು ರಕ್ಷಣಾ ಇಲಾಖೆಯು 17.50 ಎಕರೆ ಜಾಗ ನೀಡಬೇಕು. ಬಾಣಸವಾಡಿಯಲ್ಲಿ ಈಗಿರುವ ಆರ್‌ಒಬಿಗೆ ಹೆಚ್ಚುವರಿ ಲೂಪ್ ನಿರ್ಮಿಸಲು 796 ಚದರ ಮೀಟರ್ ಜಾಗದ ಅಗತ್ಯ ಇದೆ. ಬೈಯಪ್ಪನಹಳ್ಳಿಯಲ್ಲಿ ಆರ್‌ಒಬಿ ನಿರ್ಮಾಣಕ್ಕೆ 4454 ಚದರ ಮೀಟರ್ ಜಾಗ ಬೇಕಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್– 2ಕ್ಕೆ 0.11 ಎಕರೆ ಜಾಗದ ಅಗತ್ಯ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಬೇಕಿದೆ. ಇದಕ್ಕಾಗಿ ರಕ್ಷಣಾ ಇಲಾಖೆ ಶೀಘ್ರದಲ್ಲಿ ಜಾಗ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.