ಹಾವೇರಿ:ಕೊರೊನಾ ಸೋಂಕಿತ ಇಬ್ಬರು ಗರ್ಭಿಣಿಯರಿಗೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಭಾನುವಾರ ಯಶಸ್ವಿಯಾಗಿ ಹೆರಿಗೆ ಮಾಡಿಸಿದರು.
ಕೋವಿಡ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಬಂಕಾಪುರ ಪಟ್ಟಣದ 21 ವರ್ಷದ ಗರ್ಭಿಣಿ ಮತ್ತು ಸವಣೂರು ಪಟ್ಟಣದ 25 ವರ್ಷದ ಗರ್ಭಿಣಿಗೆ ಹೆರಿಗೆಯಾಯಿತು. ಹೆಣ್ಣು ಮತ್ತು ಗಂಡು ಎರಡೂ ನವಜಾತ ಶಿಶುಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಇಬ್ಬರೂ ಮಹಿಳೆಯರಿಗೆ ಜುಲೈ 29ರಂದು ಸೋಂಕು ದೃಢಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.