ADVERTISEMENT

ನೆಲದ ಮೇಲೆ ಕುಳಿತು ತಾಲ್ಲೂಕು ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 15:20 IST
Last Updated 4 ಜೂನ್ 2023, 15:20 IST
ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ 417 ನೇ ದಿನವಾದ ಭಾನುವಾರ ನೆಲದ ಮೇಲೆ ಕುಳಿತು ಮುಷ್ಕರ ನಡೆಸಲಾಯಿತು.
ಮಹಾಲಿಂಗಪುರದ ಚನ್ನಮ್ಮ ವೃತ್ತದಲ್ಲಿ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ 417 ನೇ ದಿನವಾದ ಭಾನುವಾರ ನೆಲದ ಮೇಲೆ ಕುಳಿತು ಮುಷ್ಕರ ನಡೆಸಲಾಯಿತು.   

ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಹಾಕಿದ್ದ ಹೋರಾಟ ವೇದಿಕೆ ಮಳೆ-ಗಾಳಿಯಿಂದ ನೆಲಸಮಗೊಂಡಿದ್ದರಿಂದ ಬಯಲಲ್ಲೇ ಹೋರಾಟ ಮುಂದುವರೆದಿದೆ.

ಮುಷ್ಕರದ 414 ನೇ ದಿನದ ಗುರುವಾರ ಸಂಜೆ ವೇದಿಕೆ ನೆಲಸಮಗೊಂಡಿದ್ದು, ಅದೇ ಸ್ಥಳದಲ್ಲಿ ನೆಲದ ಮೇಲೆ ಚಾಪೆ ಹಾಕಿ ಪೂಜೆ ಸಲ್ಲಿಸಿ ಉರಿಬಿಸಿಲಿನಲ್ಲಿ ಕುಳಿತು 417ನೇ ದಿನವಾದ ಭಾನುವಾರ ಮುಷ್ಕರ ಮುಂದುವರೆಸಿದರು. ಹೊಸ ವೇದಿಕೆ ನಿರ್ಮಾಣ ಮಾಡಲು ಪೂಜಾ ಕಾರ್ಯಕ್ರಮ ಮಾಡಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಸಿದ್ದು ಶಿರೋಳ, ರಫೀಕ ಮಾಲದಾರ, ರಾಜು ತೇರದಾಳ, ಮಹಾದೇವ ಮೇಟಿ, ಮಹಾಲಿಂಗಪ್ಪ ಅವರಾದಿ, ಹಣಮಂತ ಭಜಂತ್ರಿ, ಮುತ್ತು ಕೊಣ್ಣೂರ, ವಿಜಯ ದೇಸಾಯಿ, ದುಂಡಪ್ಪ ಇಟ್ನಾಳ, ಭೀಮಶಿ ನಾಯಕ, ಸತ್ಯಪ್ಪ ಹುದ್ದಾರ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.