ADVERTISEMENT

ಡೆಂಗಿ: ಸಕ್ರಿಯ ಪ್ರಕರಣ ಇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:54 IST
Last Updated 30 ಜುಲೈ 2024, 23:54 IST
<div class="paragraphs"><p>ಡೆಂಗಿ ಹರಡುವ ಈಡಿಸ್ ಸೊಳ್ಳೆ (ಸಾಂದರ್ಭಿಕ ಚಿತ್ರ)</p></div>

ಡೆಂಗಿ ಹರಡುವ ಈಡಿಸ್ ಸೊಳ್ಳೆ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ರಾಜ್ಯದಲ್ಲಿ 395 ಮಂದಿ ಹೊಸದಾಗಿ ಡೆಂಗಿ ಪೀಡಿತರಾಗಿರುವುದು ಮಂಗಳವಾರ ದೃಢಪಟ್ಟಿದ್ದು, ಈ ಜ್ವರ ಪೀಡಿತರಲ್ಲಿ 469 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಡೆಂಗಿ ಪ್ರಕರಣಗಳ ಸಂಖ್ಯೆ 2,737ಕ್ಕೆ ಇಳಿಕೆಯಾಗಿದೆ. 

ಡೆಂಗಿ ಪೀಡಿತರಲ್ಲಿ ಸದ್ಯ 2,271 ಮಂದಿ ಮನೆ ಆರೈಕೆಗೆ ಒಳಗಾದರೆ, ತೀವ್ರ ನಿಗಾ ಘಟಕದಲ್ಲಿರುವ ಎಂಟು ಮಂದಿ ಸೇರಿ 466 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ADVERTISEMENT

24 ಗಂಟೆಗಳ ಅವಧಿಯಲ್ಲಿ 2,462 ಪರೀಕ್ಷೆಗಳನ್ನು ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 216 ಸೇರಿ 26 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ಖಚಿತಪಟ್ಟಿವೆ. ರಾಮನಗರ (26) ಹಾಗೂ ಕಲಬುರಗಿಯಲ್ಲಿ (25) ಅಧಿಕ ಪ್ರಕರಣಗಳು ವರದಿಯಾಗಿವೆ. 

ರಾಜ್ಯದಲ್ಲಿ ಡೆಂಗಿ ಪತ್ತೆಗೆ ಸಂಬಂಧಿಸಿದಂತೆ ಈವರೆಗೆ 1.22 ಲಕ್ಷ ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು 17,838 ಪ್ರಕರಣಗಳು ದೃಢಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.