ADVERTISEMENT

ಡೆಂಗಿ: ತಿಂಗಳಲ್ಲಿ ಸಾವಿರ ಪ್ರಕರಣ

1.73 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಶಂಕೆ | ಬೆಂಗಳೂರಿನಲ್ಲಿ ಉಲ್ಬಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 15:15 IST
Last Updated 23 ನವೆಂಬರ್ 2022, 15:15 IST

ಬೆಂಗಳೂರು: ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಕಳೆದ ಒಂದು ತಿಂಗಳಲ್ಲಿ 1,076 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ.

ರಾಜ್ಯದಲ್ಲಿ ಈ ವರ್ಷ 1.73 ಲಕ್ಷಕ್ಕೂ ಅಧಿಕಡೆಂಗಿಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 71 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.ಈವರೆಗೆ ವರದಿಯಾದ ಒಟ್ಟುಡೆಂಗಿಪ್ರಕರಣಗಳ ಸಂಖ್ಯೆ8,184ಕ್ಕೆ ಏರಿಕೆಯಾಗಿದೆ.ಡೆಂಗಿಪೀಡಿತರಲ್ಲಿ ನಾಲ್ವರು ಮರಣ ಹೊಂದಿದ್ದಾರೆ. ಕಳೆದ ವರ್ಷ7,189ಡೆಂಗಿಪ್ರಕರಣಗಳು ದೃಢಪಟ್ಟಿದ್ದವು. ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿದ್ದರು.

ಈ ವರ್ಷ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ವರದಿಯಾಗಿವೆ.ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 60,408 ಮಂದಿಯಲ್ಲಿಡೆಂಗಿಶಂಕೆ ವ್ಯಕ್ತವಾಗಿದ್ದು, 1,580 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ.ಮೈಸೂರಿನಲ್ಲಿ 694, ಉಡುಪಿಯಲ್ಲಿ 487, ವಿಜಯಪುರದಲ್ಲಿ 404,ಚಿತ್ರದುರ್ಗದಲ್ಲಿ 386, ಕಲಬುರಗಿಯಲ್ಲಿ 358, ದಕ್ಷಿಣ ಕನ್ನಡದಲ್ಲಿ353 ಹಾಗೂ ಬೆಳಗಾವಿಯಲ್ಲಿ 302 ಡೆಂಗಿಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 300 ಕ್ಕಿಂತ ಕಡಿಮೆ ಇವೆ.

ADVERTISEMENT

29 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 57 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 30 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,944 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

ಸಮರ್ಪಕ ವಿಲೇವಾರಿ ಅಗತ್ಯ‌:‘ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನವರು ವಿವಿಧ ಜ್ವರಗಳಿಗೆ ಒಳಪಡುತ್ತಿದ್ದಾರೆ. ಸೊಳ್ಳೆಗಳ ಕಡಿತದಿಂದ ಕಾಣಿಸಿಕೊಳ್ಳುವ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮನೆಯ ಸುತ್ತಮುತ್ತಲಿನ ಹೊರಾಂಗಣ ಪ್ರದೇಶಗಳು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಖಾಲಿ ನಿವೇಶನ ಸೇರಿ ವಿವಿಧೆಡೆ ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಸ್ವಚ್ಛತೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಲಹೆ ನೀಡುವಂತೆ ಆರೋಗ್ಯ ಇಲಾಖೆಯು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯನ್ನು ಈ ಹಿಂದೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಮಿತಿ, ಈಗಾಗಲೇ ದೇಶದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಡೆಂಗಿ, ಚಿಕೂನ್‌ಗುನ್ಯಾ ಹಾಗೂ ಮಿದುಳು ಜ್ವರ ನಿಯಂತ್ರಣದ ಬಗ್ಗೆ ಸಲಹೆ ನೀಡಲು ಸಿದ್ಧವಿರುವುದಾಗಿ ಪತ್ರದಲ್ಲಿ ತಿಳಿಸಿತ್ತು. ಆದರೆ, ಇಲಾಖೆಯಿಂದ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.