ADVERTISEMENT

ಇನ್‌ಸ್ಪೆಕ್ಟರ್‌ಗಳು ಅಧಿಕಾರ ಸ್ವೀಕರಿಸಲು ಡಿಜಿ ಗಡುವು! ಅಮಾನತು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 20:33 IST
Last Updated 12 ಡಿಸೆಂಬರ್ 2023, 20:33 IST
<div class="paragraphs"><p>ಅಲೋಕ್ ಮೋಹನ್</p></div>

ಅಲೋಕ್ ಮೋಹನ್

   

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವರ್ಗಾವಣೆ ಆಗಿರುವ 50ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು ಹೊಸ ಹುದ್ದೆಯಲ್ಲಿ ಅಧಿಕಾರ ಸ್ವೀಕರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ), ಅಧಿಕಾರ ಸ್ವೀಕರಿಸಲು ವಾರದ ಗಡುವು ನೀಡಿದ್ದಾರೆ.

’ವರ್ಗಾವಣೆ ಆಗಿ ಹಲವು ದಿನವಾದರೂ ಏಕೆ ಅಧಿಕಾರ ಸ್ವೀಕರಿಸಿಲ್ಲ’ ಎಂದು ಇನ್‌ಸ್ಪೆಕ್ಟರ್ ಅವರಿಂದ ಕಾರಣ ಕೇಳಿರುವ ಡಿಜಿ–ಐಜಿಪಿ, ಸಮಂಜಸವಲ್ಲದ ಕಾರಣ ನೀಡಿದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಗೊತ್ತಾಗಿದೆ.

ADVERTISEMENT

‘ವರ್ಗಾವಣೆ ಆಗಿರುವ ಇನ್‌ಸ್ಪೆಕ್ಟರ್‌ಗಳು ಅಧಿಕಾರ ಸ್ವೀಕರಿಸಿಲ್ಲ. ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಇಲಾಖೆ ಕೆಲಸಗಳು ಆಗುತ್ತಿಲ್ಲ’ ಎಂದು ಆರೋಪಿಸಿ ಕೆಲವರು, ಡಿಜಿ–ಐಜಿಪಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರೆಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.