ADVERTISEMENT

24 ವಿದ್ಯಾರ್ಥಿನಿಯರಿಗೆ ಡಿಪ್ತೀರಿಯಾ ಸೋಂಕು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 17:40 IST
Last Updated 1 ಸೆಪ್ಟೆಂಬರ್ 2019, 17:40 IST

ಕಲಬುರ್ಗಿ: ಇಲ್ಲಿನ ‘ಜಿಮ್ಸ್‌’ ಹಾಸ್ಟೆಲ್‌ನ 24 ವಿದ್ಯಾರ್ಥಿನಿಯರಿಗೆ ಡಿಪ್ತೀರಿಯಾ (ಗಂಟಲುಮಾರಿ) ಸೋಂಕು ತಗುಲಿರುವುದು ಬಹಿರಂಗವಾಗುತ್ತಿದ್ದಂತೆ,ಜಿಲ್ಲೆಯ ವಿದ್ಯಾರ್ಥಿ ಸಮೂಹ ಹಾಗೂ ಪಾಲಕರು ತಲ್ಲಣಗೊಂಡಿದ್ದಾರೆ.

ಇದು ಸೋಂಕುರೋಗವಾಗಿದ್ದು, ಈಗ ಗಣೇಶೋತ್ಸವ ಸಹ ಇದೆ. ಈ ಸಂದರ್ಭದಲ್ಲಿ ಹೆಚ್ಚಿನ ಜನಸೇರುವೆಡೆ ಹೋಗಬೇಕಾದ ಅನಿವಾರ್ಯತೆ ಇದ್ದು, ಸೋಂಕು ತಗುಲಿದರೆ ಹೇಗೆ ಎಂಬ ಚಿಂತೆ ಬಹುಪಾಲು ಜನರನ್ನು ಕಾಡುತ್ತಿದೆ.

ಭಾನುವಾರ ಬೆಳಿಗ್ಗೆ ಜಿಮ್ಸ್‌ ಆಸ್ಪತ್ರೆಗೆ ದೌಡಾಯಿಸಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದಸಂಸದ ಡಾ. ಉಮೇಶ ಜಾಧವ, ‘ಈ ಅಂಟು ರೋಗ ಬಹಳ ಅಪಾಯಕಾರಿ, ತಕ್ಷಣವೇ ಜಿಲ್ಲೆ ಯಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.

ADVERTISEMENT

‘ಗಂಟಲು ನೋವು ಎಂದು ಜನ ಆಸ್ಪತ್ರೆಗೆ ಬಂದರೆ ಅವರಿಗೆ ಕಡ್ಡಾಯವಾಗಿ ಡಿಪ್ತೀರಿಯಾ ತಪಾಸಣೆ ಮಾಡುವಂತೆ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ  ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಈ ರೋಗ ವ್ಯಾಪಿಸುವ ಸಾಧ್ಯತೆ ಇರುವುದರಿಂದ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ಮೂರು ದಿನಗಳಿಂದ ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ ಜಿಮ್ಸ್‌ ವಿದ್ಯಾರ್ಥಿನಿಯರು, ಸಿಬ್ಬಂದಿ ಶನಿವಾರ ತಪಾಸಣೆಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.