ADVERTISEMENT

ಮಹಿಳೆಯರ ಜನಧನ್‌ ಯೋಜನೆ ಖಾತೆಗೆ ₹ 500 ನೇರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 17:10 IST
Last Updated 2 ಏಪ್ರಿಲ್ 2020, 17:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ ತಲಾ ₹500 ರೂ. ನೀಡುವುದಾಗಿ ಘೋಷಣೆ ಮಾಡಿದ ಹಣವನ್ನು ಮುಂದಿನ ಮೂರು ತಿಂಗಳ ಕಾಲ ಜನಧನ್‌ ಖಾತೆಗಳಿಗೆ ನೇರ ವರ್ಗಾಯಿಸುವುದಾಗಿ ಹಣಕಾಸು ಸಚಿವಾಲಯ ಪ್ರಕಟಣೆ ತಿಳಿಸಿದೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಪ್ರಧಾನಮಂತ್ರಿಗಳ ಜನಧನ್‌ ಯೋಜನೆಯ ಖಾತೆ ಇರುವವರ ಮಹಿಳೆಯರಿಗೆ ಏಪ್ರಿಲ್‌ 2020ರ ಅವಧಿಯ ₹500 ನ್ನು ಏಪ್ರಿಲ್‌ 2, 2020 ರಂದು ಆಯಾ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಖಾತೆದಾರರು, ಬ್ಯಾಂಕ್‌ನಿಂದ ಹಣ ಪಡೆಯುವುದಕ್ಕೆ ಏಕಕಾಲಕ್ಕೆ ಧಾವಿಸುವಂತಾಗಬಾರದು ಎಂದು ಖಾತೆಗಳ ಸಂಖ್ಯೆಗಳ ಕಡೆಯ ಅಂಕಿಯನ್ನು ಆಧಾರದ ಮೇಲೆ ದಿನಾಂಕಗಳನ್ನು ನಿಗದಿ ಮಾಡಿದ್ದು, ಖಾತೆದಾರರು ಅಂದರಂತೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ADVERTISEMENT

0 ಅಥವಾ1 ಅಂಕೆಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌ 3ರಂದು, 2 ಅಥವಾ 3 ಅಂಕೆಯಿಂದ ಕೊನೆಗೊಳ್ಳುವ ಸಂಖ್ಯೆಯುಳ್ಳವರು ಏಪ್ರಿಲ್ 4ರಂದು, 4 ಅಥವಾ 5 ಅಂಕೆಯುಳ್ಳವರು ಏಪ್ರಿಲ್‌ 7ರಂದು, 6 ಅಥವಾ 7 ಅಂಕೆಯುಳ್ಳವರು ಏಪ್ರಿಲ್‌ 8ರಂದು ಹಾಗೂ 8 ಅಥವಾ 9 ಅಂಕೆಯುಳ್ಳ ಖಾತೆ ಸಂಖ್ಯೆಯುಳ್ಳವರು ಏಪ್ರಿಲ್‌ 9ರಂದು ಹಣವನ್ನು ಪಡೆದುಕೊಳ್ಳಬಹುದಾಗಿದೆ.

9ನೇ ತಾರೀಖಿನ ನಂತರ ಯಾವುದೇ ಬ್ಯಾಂಕ್‌ ಅವಧಿಯಲ್ಲಿ ಶಾಖೆಗಳಿಗೆ ಭೇಟಿ ನೀಡಿ ಹಣ ಪಡೆದುಕೊಳ್ಳಬಹುದು. ಅಲ್ಲದೆ ಬ್ಯಾಂಕ್‌ಗಳಿಗೆ, ಖಾತೆದಾರರಿಗೆ ಅವರ ಖಾತೆ ಸಂಖ್ಯೆಗಳನ್ನು ಆಧರಿಸಿ, ಹಣ ಜಮೆಯಾಗಿರುವ ಮಾಹಿತಿ ನೀಡುವ ಜೊತೆಗೆ ಯಾವ ಶಾಖೆಗೆ ಭೇಟಿಯಾಗಬೇಕು ಎಂಬುದನ್ನು ತಿಳಿಸುವಂತೆ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.