ನವದೆಹಲಿ: ‘ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡುವ ಮೂಲಕ ನಮ್ಮ ನಾಡಿನ ನೆಲಮೂಲದ ಸಂಸ್ಕಾರ ಕಲಿಸಬೇಕು’ ಎಂದು ನಟ ದೊಡ್ಡಣ್ಣ ಸಲಹೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಆಶ್ರಯದಲ್ಲಿ ನಡೆದ ಮೂರನೇ ವಾರ್ಷಿಕೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ. ಇದರಿಂದ ಅವರ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳಲಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಟಿ. ಎಸ್.ನಾಗಾಭರಣ, ‘ವಿಶ್ವಮಾನವ ತತ್ವಗಳು ಕನ್ನಡ ಸಂಸ್ಕೃತಿ ಬೇರುಗಳಲ್ಲಿಯೇ ಇದೆ. ಎಲ್ಲ ಕಾಲದಲ್ಲೂ ಈ ಪರಂಪರೆಯನ್ನು ಕನ್ನಡದಲ್ಲಿ ಪೋಷಿಸಿಕೊಂಡು ಬರಲಾಗುತ್ತಿದೆ’ ಎಂದರು.
ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಎನ್.ಪಿ., ವಿದ್ವಾಂಸ ಪ್ರೊ.ಶ್ರೀನಿವಾಸ ವರಖೇಡಿ, ಅನಂತರಾಮ ಅರಳಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.