ADVERTISEMENT

‘ಮೀ ಟೂ ದುರುಪಯೋಗ ಸಲ್ಲದು’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 18:50 IST
Last Updated 16 ಅಕ್ಟೋಬರ್ 2018, 18:50 IST
ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ ರಾಗಿಣಿ ಮಾತನಾಡಿದರು. ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟಿ ರಾಗಿಣಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: 'ಮಿ ಟೂ ಒಳ್ಳೆಯ ಅಭಿಯಾನ. ದೌರ್ಜನ್ಯಕ್ಕೆ ಒಳಗಾಗಿರುವ ಎಲ್ಲರೂ ಧ್ವನಿ ಎತ್ತಬೇಕು. ಆದರೆ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ' ಎಂದು ನಟಿ ರಾಗಿಣಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ನನ್ನದೇ ಹಾದಿಯಲ್ಲಿ ಸಾಗಿದ ಕಾರಣ ನನಗೆ ಅಂತಹ ಯಾವುದೇ ಕೆಟ್ಟ ಅನುಭವವಾಗಿಲ್ಲ. ಒತ್ತಡ ಸೇರಿದಂತೆ ಹಲವು ಕಾರಣಗಳಿಗಾಗಿ ಅಂತಹ ಘಟನೆಗಳು ನಡೆಯುತ್ತವೆ. ದೌರ್ಜನ್ಯಕ್ಕೆ ಲಿಂಗಭೇದ ಇಲ್ಲ. ಇದೊಂದು ತಾರ್ಕಿಕ ಅಂತ್ಯಕ್ಕೆ ಹೋಗಲಿದೆ ಎಂಬ ವಿಶ್ವಾಸ ಇದೆ’ ಎಂದರು.

‘ಕನ್ನಡದ ಖ್ಯಾತ ನಟರು ಈ ಬಗ್ಗೆ ಧ್ವನಿ ಎತ್ತದಿರುವುದು ಆಶ್ಚರ್ಯ ತಂದಿದೆ. ಅವರೂ ಬೆಂಬಲ ನೀಡಬಹುದು ಎಂಬ ವಿಶ್ವಾಸ ಇದೆ. ತನುಶ್ರೀ ದತ್ತ ಅವರು ಎಂಟು ವರ್ಷಗಳ ಹಿಂದೆ ಆದ ಪ್ರಕರಣವನ್ನು ಪ್ರಸ್ತಾಪಿಸಿ ಅಭಿಯಾನ ಆರಂಭಿಸಿದರು.

ADVERTISEMENT

ದೌರ್ಜನ್ಯ ನಡೆದ ತಕ್ಷಣವೇ ಅವರು ಧೈರ್ಯವಾಗಿ ಹೇಳಿದ್ದರೆ ಅದರ ಪರಿಣಾಮ ಬೇರೆಯೇ ಇರುತ್ತಿತ್ತು. ಕೆಲವರು ಶ್ರಮಪಡದೇ ಯಶಸ್ಸು ಪಡೆಯಲು ವಾರ್ಮ ಮಾರ್ಗ ಹಿಡಿಯಬಹುದು, ಅದು ಅವರಿಗೆ ಬಿಟ್ಟ ವಿಷಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.