ADVERTISEMENT

ಬೆಂಗಳೂರು–ಚೆನ್ನೈ ಹೈ ಸ್ಪೀಡ್‌ ರೈಲಿಗೆ ಡಿಪಿಆರ್‌: ಸಚಿವ ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 14:18 IST
Last Updated 8 ಡಿಸೆಂಬರ್ 2023, 14:18 IST
ಅಶ್ವಿನಿ ವೈಷ್ಣವ್‌
ಅಶ್ವಿನಿ ವೈಷ್ಣವ್‌   

ನವದೆಹಲಿ: ಚೆನ್ನೈ–ಬೆಂಗಳೂರು–ಮೈಸೂರು ಹೈ ಸ್ಪೀಡ್‌ ರೈಲು ಕಾರಿಡಾರ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. 

ರಾಜ್ಯಸಭೆಯಲ್ಲಿ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಅಂತಿಮ ಸ್ಥಳ ಸಮೀಕ್ಷೆ, ವೆಚ್ಚದ ಅಂದಾಜುಗಳು, ಅನುಷ್ಠಾನ ಮಾದರಿ ಮತ್ತು ಹಣಕಾಸು ಆಯ್ಕೆಗಳು ಸೇರಿದಂತೆ ಎಲ್ಲ ಅಗತ್ಯ ಅಂಶಗಳನ್ನು ಡಿಪಿಆರ್ ಒಳಗೊಂಡಿರುತ್ತದೆ’ ಎಂದು ತಿಳಿಸಿದ್ದಾರೆ. 

ಸೆಮಿ ಹೈ ಸ್ಪೀಡ್‌ ರೈಲು ಯೋಜನೆಯ ಸಂಬಂಧ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.