ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಅಲ್ಲದೇ ಆಂಧ್ರ ಪ್ರದೇಶದ ಕುರಿಗಾಹಿಗಳು ಅಲ್ಲಲ್ಲಿ ಹೆಚ್ಚು ಕಾಣಸಿಗುತ್ತಾರೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು 2019ರಲ್ಲಿ ನಡೆಸಿದ 20ನೇ ಜಾನುವಾರು ಗಣತಿ ಪ್ರಕಾರ, ರಾಜ್ಯದಲ್ಲಿ 1.10 ಕೋಟಿ ಕುರಿಗಳು ಮತ್ತು 61.69 ಲಕ್ಷ ಮೇಕೆಗಳು ಇವೆ. ಬರ ಪರಿಣಾಮ ಈ ಬಾರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹಿಂಡು ಕುರಿಗಳೊಂದಿಗೆ ಬೆಳಗಾವಿ, ವಿಜಯಪುರ ಜಿಲ್ಲೆಯ ಬಹುತೇಕ ಕುರಿಗಾಹಿಗಳು ಹೋಗಿಲ್ಲ. ಕುರಿ ಸಾಕಣೆಯನ್ನೇ ನಂಬಿದವರ ಬದುಕು ದುಸ್ತರವಾಗಿದೆ. ಇವರಿಗಾಗಿಯೇ ಸರ್ಕಾರ ರೂಪಿಸಿರುವ ‘ಅನುಗ್ರಹ’ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕುರಿಗಾಹಿಗಳ ಒಟ್ಟಾರೆ ಬದುಕಿನ ಚಿತ್ರಣ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.