ಬೆಂಗಳೂರು: ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಉಚಿತ ತರಬೇತಿ ನೀಡುವ ಸಲುವಾಗಿ ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ಅಭ್ಯರ್ಥಿಗಳಿಂದ ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ ಅರ್ಜಿ ಆಹ್ವಾನಿಸಿದೆ.
ಅಕಾಡೆಮಿಯ ಆಡಳಿತ ವಿಭಾಗದ ಮುಖ್ಯಸ್ಥ ಗಿರೀಶ್ ಮಾತನಾಡಿ ‘ಮಾರ್ಚ್ 31ಕ್ಕೆ ಬೆಂಗಳೂರು, ಧಾರವಾಡ ಹಾಗೂ ಕಲಬುರ್ಗಿ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಮಾ.21ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದು. ಆಯ್ದ ಅಭ್ಯರ್ಥಿಗಳಿಗೆಉಚಿತ ತರಬೇತಿ ನೀಡಲಾಗುವುದು’ ಎಂದರು.
‘ಈ ಬಾರಿ 100ರಿಂದ 150 ಮಂದಿ ಮುಖ್ಯ ಪರೀಕ್ಷೆ ಬರೆಯಲಿದ್ದಾರೆ. ದೆಹಲಿಯ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ತರಬೇತಿ ನೀಡುವ ಇಬ್ಬರು ಪರಿಣಿತರು ಇಲ್ಲಿಯೂ ತರಬೇತಿ ನೀಡುತ್ತಿದ್ದಾರೆ’ ಎಂದು ಹೇಳಿದರು.
ನಟ ರಾಘವೇಂದ್ರ ರಾಜ್‌ಕುಮಾರ್, ‘ಐಎಎಸ್, ಕೆಎಎಸ್‌ನಂತಹ ಪರೀಕ್ಷೆಗಳನ್ನು ಬರೆಯುವ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕು ಎಂಬ ಆಸೆಯಿಂದ ಅಕಾಡೆಮಿಯನ್ನು ಆರಂಭಿಸಿದ್ದೇವೆ’ ಎಂದು ತಿಳಿಸಿದರು.
ಬೆಂಗಳೂರು ಕೇಂದ್ರದ ವಿಳಾಸ: #91, 2ಮತ್ತು 3ನೇ ಮಹಡಿ, 60 ಅಡಿ ರಸ್ತೆ, ಚಂದ್ರಾ ಲೇಔಟ್.
ಮಾಹಿತಿಗೆ: www.dracs.in ಸಂಪರ್ಕಕ್ಕೆ–9108448444
ಅಂಕಿ–ಅಂಶ
250
ಜನರ ತಂಡಕ್ಕೆ ಮೆಂಟರ್‌ಶಿಪ್ ವ್ಯವಸ್ಥೆ
85
ಮಂದಿ ಈ ಬಾರಿ ಕನ್ನಡದಲ್ಲಿ ಮುಖ್ಯ ಪರೀಕ್ಷೆ ಬರೆಯಲಿದ್ದಾರೆ
11 ತಿಂಗಳು
ಐಎಎಸ್ ಪರೀಕ್ಷೆ ತರಬೇತಿ ಅವಧಿ
9 ತಿಂಗಳು
ಕೆಎಎಸ್ ಪರೀಕ್ಷೆ ತರಬೇತಿ ಅವಧಿ
ಅಕಾಡೆಮಿಯಿಂದ ತರಬೇತಿ ಪಡೆದವರು
ವರ್ಷ;ಐಎಎಸ್; ಕೆಎಎಸ್
2017; 350;300
2018;750;650
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.