ADVERTISEMENT

ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:38 IST
Last Updated 27 ಜುಲೈ 2024, 15:38 IST
ಜಿ.ವಿ. ಹರಿಪ್ರಸಾದ್
ಜಿ.ವಿ. ಹರಿಪ್ರಸಾದ್   

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನೀಡುವ 2023–24ನೇ ಸಾಲಿನ ‘ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ’ಕ್ಕೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್‌) ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ ಆಯ್ಕೆಯಾಗಿದ್ದಾರೆ.

ನಾವೀನ್ಯತೆಯ ಅಭ್ಯಾಸ ಮತ್ತು ಪ್ರಯೋಗ ಮಾಡಿದ ರಾಷ್ಟ್ರದ ಒಟ್ಟು ನಾಲ್ಕು ಡಯಟ್‌ಗಳಲ್ಲಿ ಕರ್ನಾಟಕದಿಂದ ಶಿವಮೊಗ್ಗ ಡಯಟ್‌ಗೆ ಈ ಗೌರವ ಸಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹರಿಪ್ರಸಾದ್ ಅವರು ಕೈಗೊಂಡ ‘ಸಹಭಾಗಿತ್ವದ ಕ್ರಿಯಾ ಸಂಶೋಧನೆಯ ಮೂಲಕ ಗುಣಾತ್ಮಕ ಶಿಕ್ಷಣ’ (ಸದಿ) ಪ್ರಯೋಗಕ್ಕೆ ಈ ಪುರಸ್ಕಾರ ಲಭಿಸಿದೆ.  

ದೇಶದ 31 ಶಿಕ್ಷಕರು, ಪ್ರಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಈ ಪುರಸ್ಕಾರ ನೀಡಲಾಗಿದೆ. ಕರ್ನಾಟಕದಲ್ಲಿನ ಹುಬ್ಬಳ್ಳಿ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕಿ ಎಸ್.ಆರ್. ಶೀಲವಂತರ್‌, ಬೆಂಗಳೂರಿನ ಸೇಕ್ರೆಡ್‌ ಹಾರ್ಟ್ ಕಾಲೇಜಿನ ಉಪನ್ಯಾಸಕಿ ಕೆ.ಎಸ್‌. ತನುಜಾ, ಆರ್.ವಿ.ಟಿ.ಟಿ.ಐ ಸಂಸ್ಥೆಯ ಕೆ.ಎಚ್. ಮಮತಾ, ಧಾರವಾಡದ ವನಿತ ಶಿಕ್ಷಕರ ಸಂಸ್ಥೆಯ ಸಂಧ್ಯಾ ಜಿ. ವೈದ್ಯ ಅವರು ಶೈಕ್ಷಣಿಕ ನಾವೀನ್ಯತಾ ಗೌರವಕ್ಕೆ ಪಾತ್ರರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.