ADVERTISEMENT

ದುರ್ಗಾಂಬಿಕಾ ದೇವಿ ಜಾತ್ರೆ: ಶಾಮನೂರು ಶಿವಶಂಕರಪ್ಪರಿಂದ ಹಂದರಗಂಬ ಪೂಜೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 8:47 IST
Last Updated 28 ಜನವರಿ 2020, 8:47 IST
ದಾವಣಗೆರೆ ದುರ್ಗಾಂಬಿಕಾದೇವಿ ಜಾತ್ರೆಯ ಪೂರ್ವಭಾವಿಯಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ಹಂದರಗಂಬ ಪೂಜೆ ನೆರವೇರಿಸಿದರು.
ದಾವಣಗೆರೆ ದುರ್ಗಾಂಬಿಕಾದೇವಿ ಜಾತ್ರೆಯ ಪೂರ್ವಭಾವಿಯಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ಹಂದರಗಂಬ ಪೂಜೆ ನೆರವೇರಿಸಿದರು.   

ದಾವಣಗೆರೆ: ಮಧ್ಯ ಕರ್ನಾಟಕದ ಅತಿ ದೊಡ್ಡದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಹಂದರ ಪೂಜೆ ಮಂಗಳವಾರ ನೆರವೇರಿತು.

ಮಾ.1 ರಿಂದ 4ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಶಾಮನೂರು ಶಿವಶಂಕರಪ್ಪ ಪೂಜೆ ನೆರವೇರಿಸಿದರು.

ಆರಂಭದಲ್ಲಿ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ದುರ್ಗಾಂಬಿಕಾದೇವಿಗೆ ಉಡಿ ತುಂಬಿದರು. ಆನಂತರ ದೇವಾಲಯದ ಹೊರಗೆ ನಿಲ್ಲಿಸಿದ್ದ ಹಂದರಗಂಬಕ್ಕೆ ಪೂಜೆ ನೆರವೇರಿಸಿದರು. ಭಕ್ತರು ಕುಂಕುಮ ಹಾಗೂ ಅಕ್ಷತೆಯನ್ನು ಹಂದರಗಂಬಕ್ಜೆ ಹಾಕಿದರು.

ADVERTISEMENT

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಹಬ್ಬ ಆಚರಿಸಲು ದುಬಾರಿ ವೆಚ್ಚವಾಗುವುದರಿಂದ ಬಡವರಿಗೆ ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ದುರ್ಗಾಂಬಿಕಾ ದೇವಿ ಜಾತ್ರೆಯನ್ನು 4 ಇಲ್ಲವೇ 5 ವರ್ಷಗಳಿಗೊಮ್ಮೆ ಎಂದು ಭಕ್ತರು ಬೇಡಿಕೆ ಇಟ್ಟಿದ್ದು, ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ ನ ಎಲ್ಲಾ ಧರ್ಮದರ್ಶಿಗಳು ಸಭೆ ಸೇರಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್,ಧರ್ಮದರ್ಶಿಗಳಾದ ಯಜಮಾನ್ ಮೋತಿ ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ, ಜೆ.ಕೆ.ಕೊಟ್ರಬಸಪ್ಪ, ಮಾಜಿ ಮೇಯರ್ ಎಚ್.ಬಿ.ಗೋಣಪ್ಪ. ಮಾಜಿ ಸದಸ್ಯೆ ಲಲಿತಾ ರಮೇಶ್, ಬಿ.ಎಚ್.ವೀರಭದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.