ಹುಬ್ಬಳ್ಳಿ: ಬೆಂಗಳೂರು- ಬೆಳಗಾವಿ ನಡುವಿನ ಸೂಪರ್ ಫಾಸ್ಟ್ ರೈಲಿನಲ್ಲಿ ಬುಧವಾರ ಸಂಚರಿಸಿದ ಪ್ರಯಾಣಿಕರು ದೂಳಿನ ಸ್ನಾನ ಮಾಡಬೇಕಾಯಿತು.
ರೈಲು ಸೂಪರ್ ಫಾಸ್ಟ್ ಆಗಿ ಓಡಲು ಆರಂಭ ವಾಗುತ್ತಿದ್ದಂತೆಯೇ ಎಂಜಿನ್ ನಿಂದ ಬಿಳಿ ದೂಳಿನ ಕಣಗಳು ಆರಂಭಿಕ ಮೂರು ಬೋಗಿಗಳನ್ನು ತುಂಬಿಕೊಳ್ಳುತ್ತಿದ್ದವು. ಪ್ರಯಾಣಿಕರು ಮಾಸ್ಕ್ ಧರಿಸಿದ್ದರಿಂದ ಬಚಾವು. ಆದರೆ ಕಣ್ಣು ಬಿಡಲು ಸಾಧ್ಯವಾಗುತ್ತಿರಲಿಲ್ಲ. ದೂಳು ಎಲ್ಲರ ಮೇಲೂ ಆವರಿಸಿ ಕೊಳ್ಳುತ್ತಿತ್ತು.
ಪ್ರಯಾಣಿಕರು ಗೊಣಗಿಕೊಂಡು ತಲೆ, ಬಟ್ಟೆ ಹಾಗೂ ತಮ್ಮ ಲಗೇಜ್‌ಗಳ ಮೇಲಿದ್ದ ದೂಳನ್ನು ಕೊಡವಿಕೊಂಡು ಪ್ರಯಾಣ ಮಾಡಿದರು. ಕೇಳಲು ಟಿ. ಟಿ ಗಳು ಇರಲಿಲ್ಲ.
ದಾವಣಗೆರೆಯಿಂದ ಹಾವೇರಿ ನಡುವಿನ ಪ್ರಯಾಣ ಅವಧಿಯಲ್ಲಿ ನಾಲ್ಕೈದು ಬಾರಿ ದೂಳಿನ ಸ್ನಾನವಾಯಿತು ಎಂದು ಪ್ರಯಾಣಿಕ ಪ್ರಶಾಂತ್ ' ಪ್ರಜಾವಾಣಿ'ಗೆ ತಿಳಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರದ ಮನವಿ ಮೇರೆಗೆ ನೈರುತ್ಯ ರೈಲು ಇಲಾಖೆ ಬೆಂಗಳೂರು ಮತ್ತು ಬೆಳಗಾವಿ ನಡುವೆ ಸೂಪರ್ ಫಾಸ್ಟ್ ರೈಲನ್ನು ಓಡಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.