ADVERTISEMENT

30 ಡಿವೈಎಸ್ಪಿಗಳ ಹುದ್ದೆ ಮೇಲ್ದರ್ಜೆಗೆ: ಎಎಸ್‌ಪಿ ಅಧಿಕಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 15:24 IST
Last Updated 26 ಅಕ್ಟೋಬರ್ 2023, 15:24 IST
<div class="paragraphs"><p>p</p></div>

p

   

ಬೆಂಗಳೂರು: ರಾಜ್ಯದಲ್ಲಿರುವ 30 ಡಿವೈಎಸ್‌ಪಿ ಹುದ್ದೆಗಳನ್ನು ‘ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ’ (ಎಎಸ್‌ಪಿ) ಹುದ್ದೆಗಳಿಗೆ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

‘ರಾಜ್ಯದ ಎಸ್‌ಪಿಗಳ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಡಿವೈಎಸ್‌ಪಿ ಹುದ್ದೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಮೇಲ್ದರ್ಜೆಗೇರಿದ ಹುದ್ದೆ: ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕ ಮಗಳೂರು, ಬೆಳಗಾವಿ, ಗದಗ, ವಿಜಯಪುರ, ಧಾರವಾಡ, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ವಿಜಯನಗರ ಡಿಸಿಆರ್‌ಬಿಗಳ ಡಿವೈಎಸ್‌ಪಿಗಳು, ಬೆಂಗಳೂರು ಕೇಂದ್ರ ವಲಯ, ಮೈಸೂರು ದಕ್ಷಿಣ ವಲಯ, ಬೆಳಗಾವಿ ಉತ್ತರ ವಲಯ, ಕಲಬುರ್ಗಿ ಈಶಾನ್ಯ ವಲಯ, ದಾವಣಗೆರೆ ಪೂರ್ವ ವಲಯ, ಬಳ್ಳಾರಿ ವಲಯ, ಮಂಗಳೂರು ಪಶ್ಚಿಮ ವಲಯದ ಆಡಳಿತ ವಿಭಾಗದ ಡಿವೈಎಸ್‌ಪಿಗಳು ಹಾಗೂ ಸಿಐಡಿಯ ನಾಲ್ವರು ಡಿವೈಎಸ್‌ಪಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.