ADVERTISEMENT

ಇ–ಖಾತಾ ಸಮಸ್ಯೆ: ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 16:17 IST
Last Updated 11 ನವೆಂಬರ್ 2024, 16:17 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಬೆಂಗಳೂರು: ರಾಜ್ಯದಲ್ಲಿ ಇ–ಖಾತೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ಉಂಟಾಗಿರುವ ಗೊಂದಲ ಮತ್ತು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬುಧವಾರ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರು ಬೈರತಿ ಸುರೇಶ್‌ ಮತ್ತು ಮತ್ತು ಪೌರಾಡಳಿತ ಸಚಿವ ರಹೀಂಖಾನ್ ಅವರು ಭಾಗವಹಿಸಲಿದ್ದಾರೆ.

ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿಗಾಗಿ ಇ–ಖಾತಾ ತುರ್ತಾಗಿ ವಿತರಿಸುವ ಕುರಿತು ಚರ್ಚೆ ನಡೆಯಲಿದೆ. ಮಂಗಳೂರು ಮತ್ತು ಇತರ ಕೆಲವು ಕಡೆಗಳಲ್ಲಿ ವಿತರಿಸುತ್ತಿರುವ ಇ–ಆಸ್ತಿ ಖಾತೆಗಳಲ್ಲಿ ಸ್ಥಿರಾಸ್ತಿ ಅಳತೆಯ ವಿವರಗಳು ನಮೂದಾಗದೇ ಇರುವುದರಿಂದ ನೋಂದಣಿಗೆ ಸಮಸ್ಯೆ ಆಗುತ್ತಿರುವ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.

ADVERTISEMENT

ಕೃಷಿ ಜಮೀನು ಭೂಪರಿವರ್ತನೆ ಆದ ನಂತರ ನಿವೇಶನ ಬಿಡುಗಡೆಗೊಳಿಸುವ ಮುನ್ನ ಉದ್ಯಾನವನ, ಸಿಎ ನಿವೇಶನ ಮತ್ತು ರಸ್ತೆ ಜಮೀನುಗಳ ಪರಿತ್ಯಾಜನ ಪತ್ರ ನೀಡಲು ಅನುಕೂಲವಾಗುವಂತೆ ಇರುವ ಇ–ಖಾತಾ ಮಂಜೂರು ಮಾಡುವ ಕುರಿತು ಚರ್ಚಿಸಲಾಗುತ್ತದೆ.

ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ ಟಿಡಿಆರ್‌ಗಳನ್ನು ಪುನರ್‌ ಉಪಯೋಗಿಸದಂತೆ ತಡೆಯಲು ಟಿಡಿಆರ್‌ಗಳಿಗೂ ಇ– ಖಾತೆಯನ್ನು ವಿತರಿಸುವ ಕುರಿತು, ಭೂಪರಿವರ್ತನೆ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್‌ ಪ್ಲಾನ್‌ಗೆ ಅನುಮತಿ ಪಡೆಯದೇ ಜಮೀನನ್ನು ಮಾರಾಟ ಮಾಡಬೇಕಾಗಿದ್ದಲ್ಲಿ ಅಂತಹ ಆಸ್ತಿಗಳಿಗೆ ಉಂಡೆ ಖಾತೆ ಮಾಡುವುದು ಹಾಗೂ ಇಂತಹ ಜಮೀನುಗಳನ್ನು ಮಾಡುವಾಗ ಮಾರ್ಗಸೂಚಿ ದರ ನಿಗದಿಪಡಿಸುವ ವಿಚಾರವೂ ಚರ್ಚೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.