ಹೊಸನಗರ: ವಾರಾಹಿ ಜಲವಿದ್ಯುತ್ ಯೋಜನಾ ಪ್ರದೇಶವಾದ ಮಾಸ್ತಿಕಟ್ಟೆ, ಯಡೂರು, ಸುಳಗೋಡು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ 1.30ಕ್ಕೆ ಭೂಕಂಪನದ ಅನುಭವ ಆಗಿದೆ.
ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಸುಳಗೋಡು, ನಿಡಗೋಡು, ಹೆಬ್ಬಳಬೈಲು, ಕೊರನಕೋಟೆ, ಮೇಗರವಳ್ಳಿ ಗ್ರಾಮಗಳಲ್ಲಿ ಭೂಮಿ ನಡುಗಿದ ಪರಿಣಾಮ ಬಹುತೇಕ ಮನೆಗಳಲ್ಲಿ ಪಾತ್ರೆಗಳು ಕೆಳಗೆ ಬಿದ್ದಿವೆ.
ಮನೆ ನಡುಗಿದ ಶಬ್ದಕ್ಕೆ ಎಚ್ಚರಗೊಂಡ ಗ್ರಾಮಸ್ಥರು ಮಧ್ಯರಾತ್ರಿ ರಸ್ತೆಗೆ ಬಂದು ರಾತ್ರಿ ಬಹುಕಾಲ ಹೊರಗೇ ಕಳೆದರು ಎಂದು ಯಡೂರಿನ ಶಿವಕುಮಾರ ಜೋಯ್ಸ್ ತಿಳಿಸಿದರು.
ಭೂಕಂಪನಕ್ಕೆ ಮೊದಲು ದೊಡ್ಡ ಶಬ್ದವಾಗಿದೆ. ನಂತರ ಭೂಮಿ ನಡುಗಿದೆ. ಬಲ್ಬ್, ಪಾತ್ರೆಗಳು ಕೆಳಗೆ ಉರುಳಿವೆ. ಕೌರಿ ದೇವೇಂದ್ರ ನಾಯ್ಕ ಎಂಬುವವರ ಮನೆ ಗೋಡೆ ಬಿರುಕು ಬಿಟ್ಟಿದೆ ಎಂದು ಛಾಯಾಚಿತ್ರಗಾರ ತೊಳಲೆಮನೆ ಸತ್ಯನಾರಾಯಣ ಹೇಳಿದರು.
ತೀರ್ಥಹಳ್ಳಿ ವರದಿ: ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಭೂಮಿ ಕಂಪಿಸಿದ ಅನುಭವ ಆಗಿದೆ.
ಭೂಮಿ ಒಳಪದರ ಕುಸಿತ?: ತಾಲ್ಲೂಕಿನಲ್ಲಿರುವ ಚಕ್ರಾ ಹಾಗೂ ಸಾವೆಹಕ್ಕಲು ಅಣೆಕಟ್ಟಿಅನ ಸುತ್ತಲಿನ ಗ್ರಾಮದಲ್ಲಿ 10 ವರ್ಷದ ಹಿಂದೆ ದೊಡ್ಡ ಶಬ್ದದ ಜತೆಗೆ ಭೂಕಂಪನದ ಅನುಭವ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.