ADVERTISEMENT

ಬೋಧಕರಿಗೆ ಚುನಾವಣಾ ಹೊಣೆ: ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಕಾರ್ಯಗಳಿಗೆ ಅಡಚಣೆ

ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಕಾರ್ಯಗಳಿಗೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 18:53 IST
Last Updated 31 ಮಾರ್ಚ್ 2023, 18:53 IST
   

ಬೆಂಗಳೂರು: ಚುನಾವಣಾ ಕಾರ್ಯಕ್ಕೆ ಶಿಕ್ಷಕರು, ಉಪನ್ಯಾಸಕರನ್ನು ಅಧಿಕ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿ
ದ್ದು, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಕಾರ್ಯಗಳಿಗೆ ಅಡಚಣೆಯಾಗಿದೆ.

ರಾಜ್ಯದಲ್ಲಿ ಸರ್ಕಾರದ 14ಕಾಲೇಜು ಸೇರಿ 208 ಎಂಜಿನಿಯರಿಂಗ್ ಕಾಲೇಜುಗಳಿವೆ. 2.65 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಬಾರಿ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರನ್ನು ಅಧಿಕ ಸಂಖ್ಯೆಯಲ್ಲಿಚುನಾವಣಾ ಕಾರ್ಯಕ್ಕೆ ನಿಯೋಜಿಸಲಾ
ಗಿದೆ. ಹಾಗಾಗಿ, ಬೆಸ ಸಂಖ್ಯೆಯ ನಾಲ್ಕು (1,3,5,7) ಸೆಮಿಸ್ಟರ್‌ನ ತರಗತಿ ಗಳು ಸುಸೂತ್ರವಾಗಿ ನಡೆಯದೇ ವಿದ್ಯಾ
ರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.

‘ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏಳನೇ ಸೆಮಿಸ್ಟರ್‌ ಓದುತ್ತಿರುವೆ. ಕಾಲೇಜಿನಲ್ಲಿ 65 ಉಪನ್ಯಾಸಕರು ಇದ್ದಾರೆ. ಅವರಲ್ಲಿ 58 ಉಪನ್ಯಾಸಕರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಒಂದು ದಿನವೂ ಸರಿಯಾಗಿ ಪಾಠಗಳು ನಡೆಯುತ್ತಿಲ್ಲ. ಕೋವಿಡ್‌ ಸಮಯದಲ್ಲಿ ಎರಡು ಸೆಮಿಸ್ಟರ್‌ನ ತರಗತಿಗಳು ಸಂಪೂರ್ಣ ನಷ್ಟವಾಗಿದ್ದವು. ಆ ತರಗತಿಗಳನ್ನು ಇಂದಿಗೂ ಸರಿದೂಗಿಸಲು ಸಾಧ್ಯವಾಗಿಲ್ಲ. ಈಗ ಮತ್ತೆ ತರಗತಿಗಳಿಲ್ಲದ ಸ್ಥಿತಿ ಎದುರಿಸುತ್ತಿದ್ದೇವೆ’ ಎಂದು ವಿದ್ಯಾರ್ಥಿ ಆಶಿಕ್‌ ರಾಜ್‌ ಬೇಸರ ತೋಡಿಕೊಂಡರು.

ADVERTISEMENT

ರಾಜ್ಯದಲ್ಲಿ 430 ಪದವಿ ಕಾಲೇಜುಗಳಿದ್ದು, ಕಾಯಂ ಅಧ್ಯಾಪಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವಿಎಂ ಯಂತ್ರಗಳ ತಪಾಸಣೆ, ಚೆಕ್‌ಪೋಸ್ಟ್‌ ನಿಗಾ ಮತ್ತಿತರ ಕೆಲಸಗಳಲ್ಲಿ ನಿಯೋಜನೆಗೊಂಡ ಅಧ್ಯಾಪಕರನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವರು ಸೆಮಿಸ್ಟರ್‌ಗಳ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದಾರೆ. ಉಳಿದ ಶೇ 20ರಷ್ಟು ಅಧ್ಯಾಪಕರು ಕಾಲೇಜುಗಳಿಗೆ ಹಾಜರಾದರೂ, ನಿಯಮಿತವಾಗಿ ತರಗತಿಗಳು ನಡೆಯದೇ ವಿದ್ಯಾರ್ಥಿ ಗಳಿಗೆ ತೊಂದರೆಯಾಗಿದೆ.

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪ್ರೌಢಶಾಲಾ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯವನ್ನೂ ನಿರ್ವಹಿಸುತ್ತಿದ್ದಾರೆ. ಪರೀಕ್ಷೆ ಮುಗಿದ ನಂತರ ಚುನಾವಣಾ ಕಾರ್ಯಕ್ಕೆ ತೆರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.