ಬೆಂಗಳೂರು: ಚುನಾವಣೆ ಸಂದರ್ಭದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ ಛಾಯಾಚಿತ್ರಗ್ರಾಹಕ ಪಿ.ರಂಜು ಅವರ ಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.
ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಏಪ್ರಿಲ್ 18 ಮತ್ತು 23ರಂದು ನಡೆದ ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮತಗಟ್ಟೆ, ಮತದಾನ ಸಿದ್ಧತೆ ಮತ್ತು ಮತದಾನ ವಾತಾವರಣದ ವಿಷಯಗಳನ್ನು ಸ್ಪರ್ಧೆಗೆ ನೀಡಲಾಗಿತ್ತು. ಸ್ಪರ್ಧೆಯಲ್ಲಿ 44 ಛಾಯಾಗ್ರಾಹಕರು ಭಾಗವಹಿಸಿದ್ದರು. ಪ್ರಶಸ್ತಿ ಆಯ್ಕೆಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
ಇತರ ಬಹುಮಾನ ವಿಜೇತರು: ಪ್ರಕಾಶ್ ಕಂದಕೂರ್, ವಿಶ್ವವಾಣಿ (ದ್ವಿತೀಯ), ಶಂಕರ ಗುರಿಕಾರ, ಕನ್ನಡಪ್ರಭ (ತೃತೀಯ), ಸಮಾಧಾನಕರ ಬಹುಮಾನ– ಟಿ.ಕೆ.ಧನಂಜಯ, ಕಂದಾವರ ವೆಂಕಟೇಶ್, ವಿಶೇಷ ಬಹುಮಾನ– ನಾಗರಾಜ್ ಗಡೇಕಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.