ADVERTISEMENT

ರಾಜ್ಯದ ಸರ್ಕಾರಿ ಶಾಲಾ–ಕಾಲೇಜಿಗೆ ವಿದ್ಯುತ್‌–ನೀರು ಉಚಿತ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 18:29 IST
Last Updated 16 ಡಿಸೆಂಬರ್ 2023, 18:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್‌ ಹಾಗೂ ನೀರು ಪೂರೈಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದಾದ ಒಂದೂವರೆ ತಿಂಗಳಲ್ಲೇ ಆದೇಶ ಹೊರಡಿಸಲಾಗಿದೆ.

ADVERTISEMENT

2024–25ನೇ ಸಾಲಿನಿಂದ ಸರಬರಾಜು ಮಾಡುವ ವಿದ್ಯುತ್‌ ಹಾಗೂ ನೀರಿಗೆ ಬೇಕಾಗುವ ವಾರ್ಷಿಕ ವೆಚ್ಚದ ಪ್ರಸ್ತಾವವನ್ನು ಇಂಧನ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ನೇರವಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಿ, ಅಗತ್ಯ ಅನುದಾನ ಪಡೆಯಲಿವೆ. 2023–24ನೇ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಬಳಸಿರುವ ಹಾಗೂ ಬಳಸಲಿರುವ ವಿದ್ಯುತ್‌ ಹಾಗೂ ನೀರಿನ ಶುಲ್ಕ ಪಾವತಿಗಾಗಿ ಅಗತ್ಯವಿರುವ ಜಿಲ್ಲಾವಾರು ಅನುದಾನದ ಪ್ರಸ್ತಾವವನ್ನು ಪ್ರಾಥಮಿಕ–ಪ್ರೌಢ ಶಾಲೆಗಳು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಪದವಿಪೂರ್ವ ಕಾಲೇಜುಗಳು ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

’ಸರ್ಕಾರಿ ಶಾಲಾ–ಕಾಲೇಜುಗಳಿಗೆ ಉಚಿತ ವಿದ್ಯುತ್‌, ನೀರು ಪೂರೈಸುವ ಆದೇಶ ಅತ್ಯಂತ ಮಹತ್ವದ್ದು. ಇದರಿಂದ ಉಳಿತಾಯವಾಗುವ ಹಣವನ್ನು ಶಾಲೆಗಳ ಇತರೆ ಅಭಿವೃದ್ಧಿ ಕೆಲಸಗಳಿಗೆ, ಮಕ್ಕಳ ಅಗತ್ಯಕ್ಕೆ ಬಳಸಿಕೊಳ್ಳಲು ನೆರವಾಗಲಿದೆ. ಎಲ್ಲ ಶಿಕ್ಷಕರು, ಉಪನ್ಯಾಸಕರು ವಿದ್ಯುತ್‌, ನೀರಿನ ಮಿತ ಬಳಕೆಗೆ ಆದ್ಯತೆ ನೀಡಬೇಕು‘ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.