ADVERTISEMENT

ತಾಯಿ, ಮಗು ಬಲಿ: ಜಾರ್ಜ್‌ ರಾಜೀನಾಮೆಗೆ ಆರ್. ಅಶೋಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 16:38 IST
Last Updated 22 ನವೆಂಬರ್ 2023, 16:38 IST
ಸಚಿವ ಆರ್. ಅಶೋಕ
ಸಚಿವ ಆರ್. ಅಶೋಕ   

ಬೆಂಗಳೂರು: ತಾಯಿ, ಮಗು ಬಲಿ ಪಡೆದ ವಿದ್ಯುತ್ ಅವಘಡ ಪ್ರಕರಣ ಕುರಿತು ಸಬೂಬು ಹೇಳದೆ ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಒತ್ತಾಯಿಸಿದ್ದಾರೆ.

‘ತಂತಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿ ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿದ್ದಾರೆ. ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆಯೇ ದುರಂತಕ್ಕೆ ಕಾರಣ. ಆದರೂ, ಹೊಣೆಗಾರಿಕೆಯಿಂದ ನುಣುಚಿಕೊಂಡು ಸಂವೇದನಾರಹಿತರಾಗಿ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ತನಿಖೆಗೆ ನಾಲ್ಕು ಸಮಿತಿ ರಚಿಸಿರುವುದಾಗಿ ಜಾರ್ಜ್‌ ಅವರೇ ಹೇಳಿದ್ದಾರೆ. ತನಿಖೆ ಆರಂಭಕ್ಕೂ ಮೊದಲೇ ಇಲಿಯನ್ನು ಆರೋಪಿಯಾಗಿಸಿದ್ದಾರೆ. ತನಿಖೆಯ ಹಾದಿ ತಪ್ಪಿಸುವ ಯತ್ನ ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕು. ಜಾರ್ಜ್‌ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದಿದ್ದಾರೆ.

ADVERTISEMENT

ರಾಜೀನಾಮೆ ಹಾಗೂ ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.