ADVERTISEMENT

ಬೆಂಗಳೂರಿಗೆ ಮೊದಲ ಭೇಟಿ; ಸಲಹೆ ಕೇಳಿದ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ

ಪಿಟಿಐ
Published 24 ಮೇ 2024, 8:42 IST
Last Updated 24 ಮೇ 2024, 8:42 IST
<div class="paragraphs"><p>ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ</p></div>

ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ

   

ಪಿಟಿಐ ಚಿತ್ರ

ಬೆಂಗಳೂರು: ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಅವರು ಮೊದಲ ಬಾರಿಗೆ ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿರುವ, ನಗರದಲ್ಲಿ ನೋಡಬೇಕಾದ ಸ್ಥಳಗಳು, ಸವಿಯಬೇಕಾದ ಆಹಾರ ಕುರಿತಂತೆ ಸಲಹೆಗಳನ್ನು ನೀಡುವಂತೆ ವಿನಂತಿ ಮಾಡಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡಿರುವ ಅವರು, ‘ನಮಸ್ಕಾರ ಬೆಂಗಳೂರು! ನಾನು ಭಾರತದ ಸಿಲಿಕಾನ್‌ ವ್ಯಾಲಿಯಾಗಿರುವ ಮತ್ತು ಬಾಹ್ಯಾಕಾಶ ನೆಲೆಯಾಗಿ ಬೆಳೆಯುತ್ತಿರುವ ಬೆಂಗಳೂರನ್ನು ನೋಡಲು ಉತ್ಸುಕನಾಗಿದ್ದೇನೆ. ನಾನು ಅಲ್ಲಿರುವಾಗ ನೋಡಲೇಬೇಕಾದ ದೃಶ್ಯಗಳು ಮತ್ತು ತಪ್ಪದೆ ಸವಿಯಬೇಕಾದ ಒಂದು ಖಾದ್ಯ ಯಾವುದು ಎಂದು ತಿಳಿಯಲು ಕುತೂಹಲದಿಂದ್ದೇನೆ’ ಎಂದು ತಿಳಿಸಿದ್ದಾರೆ.

ವಿಡಿಯೊದಲ್ಲಿ ಮಾತನಾಡಿರುವ ಅವರು, ‘ನಮಸ್ಕಾರ ಬೆಂಗಳೂರು! ಹೇಗಿದ್ದೀರಾ ಎಂದು ಕನ್ನಡದಲ್ಲಿ ಕೇಳಿದ್ದಾರೆ. ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ರಾಯಭಾರಿಯಾಗಿ ಈ ವಾರ ಬೆಂಗಳೂರಿಗೆ ನನ್ನ ಮೊದಲ ಭೇಟಿ ನೀಡಲು ತುಂಬಾ ಉತ್ಸುಕನಾಗಿದ್ದೇನೆ. ಬೆಂಗಳೂರು ಮಾತ್ರವಲ್ಲ ಅದು ನಮ್ಮ ಊರು ಬೆಂಗಳೂರು. ಆದ್ದರಿಂದ, ಪ್ರವಾಸದ ಸಮಯದಲ್ಲಿ ನೋಡಬೇಕಾದ ಸ್ಥಳಗಳು ಯಾವುವು?, ಸವಿಯಬೇಕಾದ ಆಹಾರ ಯಾವುದು?, ಹಾಗೂ ನಾನು ಅನುಭವಿಸಬೇಕಾದ ಅನುಭವಗಳು ಯಾವುವು? ಎಂಬುದರ ಕುರಿತು ನಿಮ್ಮ ಸಲಹೆಗಳು ಬೇಕು’ ಎಂದು ಕೇಳಿದ್ದಾರೆ.

ನಿಮ್ಮ ಸಲಹೆಗಳನ್ನು ನಮಗೆ ಕಳುಹಿಸಿ ಎಂದು ಬೆಂಗಳೂರಿಗರಿಗೆ ಕರೆ ನೀಡಿರುವ ಅವರು, ‘ಅಮೆರಿಕ ಮತ್ತು ಭಾರತವೆಂಬ ಅಕ್ಷರಶಃ ಎರಡು ನಕ್ಷತ್ರಗಳಾದ ಸಂಬಂಧವನ್ನು ವಿಸ್ತರಿಸುವ ಕುರಿತಾದ ವರದಿಯನ್ನು ಸುಂದರ ನಗರ ಬೆಂಗಳೂರಿನಿಂದ ನಿಮಗೆ ಕಳುಹಿಸುತ್ತೇನೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.