ಶಿವಮೊಗ್ಗ: ‘ಅಪ್ಪನ ಆಸ್ತಿಹಂಚಿಕೊಳ್ಳಲು ಹೊಡೆದಾಡುತ್ತಾರೆ. ಹೀಗಿರುವಾಗ ಸಾರ್ವಜನಿಕ ಅಧಿಕಾರ ಪಡೆಯಲುಕಿತ್ತಾಟ ನಡೆಸುವುದುತಪ್ಪೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದಿದ್ದರೆ ಇಂತಹ ಪ್ರಮೇಯ ಬರುತ್ತಿರಲಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಆದ್ಯತೆ ನೀಡುವುದು ಅನಿವಾರ್ಯ.ವರಿಷ್ಠರ ಸೂಚನೆಯಂತೆ ಅವರೆಲ್ಲ ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.ಸಂಪುಟ ವಿಸ್ತರಣೆಯ ನಂತರ ಚರ್ಚಿಸಿ, ಖಾತೆಗಳ ಹಂಚಿಕೆ ಮಾಡಲಾಗುತ್ತದೆ’ ಎಂದರು.
‘ಬೇರೆ ಪಕ್ಷದ ಶಾಸಕರನ್ನು ಕರೆತರುವಲ್ಲಿ, ಬಿಜೆಪಿ ಅಧಿಕಾರ ಹಿಡಿಯುವಲ್ಲಿಸಿ.ಪಿ.ಯೋಗೀಶ್ವರ್ ಶ್ರಮವಿರಬಹುದು. ಅದಕ್ಕಾಗಿಯೇ ಅವರನ್ನೂ ಪರಿಗಣಿಸಿರಬಹುದು. ಪಕ್ಷದಲ್ಲಿ ಯಾವುದೇಬಂಡಾಯವಿಲ್ಲ.ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ’ ಎಂದು ಪ್ರಸಕ್ತ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.