ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನವಿವೇಕಾನಂದ ಮಹಾವಿದ್ಯಾಲಯದಡಿ.ಅರುಣ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ₹10 ಸಾವಿರ ನಗದು ಬಹುಮಾನ ಸಿಕ್ಕಿದೆ.
ತುಮಕೂರು ವಿಶ್ವವಿದ್ಯಾಲಯದ ಎಂ.ವಿ.ಅಭಿಷೇಕ್ದ್ವಿತೀಯ ಸ್ಥಾನ (₹7 ಸಾವಿರ ನಗದು ಬಹುಮಾನ) ಹಾಗೂ ಕುಂದಾಪುರದ ಭಂಡಾರ್‌ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸರಿತಾ ಶೆಟ್ಟಿ ತೃತೀಯ ಸ್ಥಾನ (₹5 ಸಾವಿರ ನಗದು ಬಹುಮಾನ) ಪಡೆದಿದ್ದಾರೆ.
₹2 ಸಾವಿರ ಮೊತ್ತದ ಮೆಚ್ಚುಗೆಯ ಬಹುಮಾನಕ್ಕೆ ಬಿ.ಆರ್.ಹೇಮಾ (ಮಂಡ್ಯ), ಎಂ.ಡಿ.ಕಾವ್ಯ (ಶಿವಮೊಗ್ಗ), ಜಯಶ್ರೀ ಶ್ರೀಪಾದ ಭಟ್ಟ (ಕಾರವಾರ), ಕೆ.ಮೇಘಶ್ರೀ (ಕಾರವಾರ), ನವೀನ್ ಆರ್.ಭಟ್ (ಉಡುಪಿ) ಬಿ.ಆರ್.ವನಜಾಕ್ಷಿ (ಹಾಸನ), ಎಸ್.ಸುವರ್ಣ (ಯಾದಗಿರಿ), ಪನ್ನಗ ಪಿ.ರಾಯ್ಕರ್ (ಹೊಸದುರ್ಗ), ಶಬ್ರಿನ್ ಕೌಸರ್ (ಮೈಸೂರು), ಎಚ್.ಜಿ.ಮಮತಾ (ತುಮಕೂರು) ಸೇರಿ ಒಟ್ಟು 10 ಮಂದಿ ಆಯ್ಕೆಯಾಗಿದ್ದಾರೆ.
‘ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ವಿಷಯ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ 20 ಜಿಲ್ಲೆಗಳ 126 ಕಾಲೇಜುಗಳಿಂದ ಒಟ್ಟು 224 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.